ಸುಳ್ಯದಲ್ಲಿ ಬಂಟರ ಸಮಾವೇಶ : ಬಂಟರ ಸಮುದಾಯ ಭವನ ದಾನಿಗಳಿಗೆ ಸನ್ಮಾನ, ಹಿರಿಯರ ದೂರದೃಷ್ಟಿಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ : ಅಜಿತ್ ರೈ, ಹಿರಿಯರ ಕೆಲಸಗಳು ಮುಂದಿನ ಪೀಳಿಗೆಗೆ ಮಾದರಿ : ಸೀತಾರಾಮ ರೈ

0

ನಮ್ಮ ಹಿರಿಯರ ಪರಿಣಾಮವಾಗಿ ಬಂಟ ಸಮಾಜದ ಬಂಧುಗಳು ವಿದ್ಯಾವಂತರಾಗಿ ಸುಸಂಸ್ಕೃತರಾಗಿ ಸಮಾಜದಲ್ಲಿ ಗುರುತಿಸುವಂತಾಗಿದೆ. ಸುಳ್ಯದಲ್ಲಿ ನಿರ್ಮಾಣ ವಾಗಿರುವ ಬಂಟರ ಭವನ ಸಮಾಜದ ಬೆಳವಣಿಗೆಗೆ ದೊಡ್ಡ ಕೊಡುಗೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.

ಸುಳ್ಯದಲ್ಲಿ ಕೇರ್ಪಳ – ಬೂಡಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಂಟರ ಸಮುದಾಯ ಭವನದಲ್ಲಿ ಡಿ.24 ರಂದು ಸಂಜೆ ಬಂಟರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

“ಬಂಟ ಸಮಾಜದವರು ಎಲ್ಲ ಕ್ಷೇತ್ರದಲ್ಲಿ ಇಂದು ತೊಡಗಿಸಿಕೊಂಡಿದ್ದಾರೆ.‌ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ.‌ ಆದರೆ ಇಲ್ಲಿ ನಮ್ಮ ಸಮಾಜದ ಜನ ಸಂಖ್ಯೆ ಕಡಿಮೆಯಾಗಿ ನಾವು ಅಲ್ಪಸಂಖ್ಯಾತರಾಗುತ್ತಿದ್ದೇವೆ ಎಂಬ ಭಯ ಕಾಡುತ್ತಿದೆ.‌ ಈ ಬಗ್ಗೆ ನಮ್ಮ ಸಮಾಜದ ಎಲ್ಲರೂ ಚಿಂತನೆ ನಡೆಸುವ ಅಗತ್ಯ ಇದೆ” ಎಂದು‌ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸವಣೂರು ಸೀತಾರಾಮ ರೈಯವರು ಮಾತನಾಡಿ “40 ವರ್ಷಗಳ ಹಿಂದೆ 6 ಮಂದಿ ಸೇರಿಕೊಂಡು ಸುಳ್ಯದಲ್ಲಿ ಬಂಟರ ಸಂಘ ಆರಂಭ ಮಾಡಿದೆವು. ಆಗ ನಮ್ಮ ಸಮಾಜದ ಜನ ಸಂಖ್ಯೆ ಕಡಿಮೆ ಇತ್ತು. ನಾವು ಸಮಾಜದ ಸಂಘಟನೆಗಾಗಿ ಶ್ರಮ ವಹಿಸಿದ್ದೆವು. ಸಮಾಜಕ್ಕೆ 1 ಎಕ್ರೆ ಜಾಗ ಆ ಕಾಲದಲ್ಲಿ ಮಾಡಿದ್ದೇವೆ. ಇಂದು ಇಲ್ಲಿ ಸುಂದರ ಸಮುದಾಯ ಭವನ ನಿರ್ಮಾಣವಾಗಿರುವುದು ಸಂತೋಷ ತರಿಸಿದೆ ಎಂದ ಅವರು “ಬಂಟ ಸಮುದಾಯ ಸಮಾಜಕ್ಕೆ ನಾಯಕತ್ವ ನೀಡಿದೆ. ಬಂಟರು ಸ್ವಾರ್ಥ ನೋಡದೆ ತನ್ನ ಸಮಾಜದ ಜತೆಗೆ ಇತರ ಸಮಾಜವನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಹಿರಿಯರ ಎಲ್ಲ ಕೆಲಸಗಳು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.

ಬಂಟರ ಯಾನೆ ನಾಡವರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ಜಯಪ್ರಕಾಶ್ ರೈ ಎನ್ ಅಧ್ಯಕ್ಷತೆ ವಹಿಸಿದ್ದರು. ” ವಿಶ್ವ ಮಾನವ ತತ್ವದಡಿಯಲ್ಲಿ ಬಂಟ ಸಮಾಜ ಮುನ್ನಡೆಯುತ್ತಿದೆ.‌ ಈ ಸಮುದಾಯ ಭವನದಿಂದ ಬರುವ ಆದಾಯ ಸಮಾಜದ ಬಡವರು, ಹಿಂದುಳಿದವರಿಗೆ ಕೊಡುವ ಕೆಲಸ ಆಗಬೇಕು.‌ ಯುವ ಪೀಳಿಗೆ ಮುಂದೆ ಬಂದು ಸಮುದಾಯದ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಸುಳ್ಯ ಎ.ಸಿ.ಎಫ್. ಪ್ರವೀಣ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚನಿಲ, ಪುತ್ತೂರು ಬಂಟರ ಸಮುದಾಯದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿರಿಯರಾದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಭಾಗವಹಿಸಿದ್ದರು.

ಬಂಟರ ಸಂಘದ ಗೌರವಾಧ್ಯಕ್ಷರಾದ ಕೇನ್ಯ ರವೀಂದ್ರನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ ಸುಭಾಶ್ಚಂದ್ರ ರೈ ತೋಟ, ಕೋಶಾಧಿಕಾರಿ ಎಸ್.ಗಂಗಾಧರ ರೈ, ಅರಂತೋಡು ವಲಯಾಧ್ಯಕ್ಷ ಗಿರೀಶ್ ರೈ, ಬಾಳಿಲ ವಲಯಾಧ್ಯಕ್ಷ ವಿಶ್ವನಾಥ ರೈ ಕಳಂಜ, ಬೆಳ್ಳಾರೆ ವಲಯಾಧ್ಯಕ್ಷ ಕರುಣಾಕರ ಆಳ್ವ, ಜಾಲ್ಸೂರು ವಲಯಾಧ್ಯಕ್ಷ ಶಿವರಾಮ ರೈ, ಸುಬ್ರಹ್ಮಣ್ಯ ವಲಯಾಧ್ಯಕ್ಷ ಪದ್ಮನಾಭ ರೈ, ಸುಳ್ಯ ವಲಯಾಧ್ಯಕ್ಷ ದಯಾಕರ ರೈ, ಮಹಿಳಾ ಘಟಕ ಗೌರವಾಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ವಿ ಶೆಟ್ಟಿ, ಅಧ್ಯಕ್ಷೆ ಶ್ರೀಮತಿ ಇಂದಿರಾ ಆರ್ ರೈ, ಕಾರ್ಯದರ್ಶಿ ಶ್ರೀಮತಿ ಉಷಾಲತಾ ಬಿ. ರೈ, ವಹಿಸಿದ್ದರು. ಶ್ರೀಮತಿ ಶರ್ಮಿಳಾ ವಿ ರೈ, ಯುವ ಘಟಕದ ಗೌರವಾಧ್ಯಕ್ಷ ಅಮೃತ್ ಕುಮಾರ್ ರೈ, ಅಧ್ಯಕ್ಷ ಪ್ರೀತಮ್ ರೈ ಬೆಳ್ಳಾರೆ, ಕಾರ್ಯದರ್ಶಿ ಸುಜಿತ್ ರೈ ಪಟ್ಟೆ ಇದ್ದರು.