ಕೊಯ್ನಾಡಿನಲ್ಲಿ ಆನೆಗಳ ಹಿಂಡು : ಓಟಕ್ಕಿತ್ತ ಸ್ನಾನ ಮಾಡಲು ಬಂದಿದ್ದ ಯುವಕರು

0


ಕೊಯ್ನಾಡು ಸಮೀಪ ಪಯಸ್ವಿನಿ ನದಿಯ ದಡದಲ್ಲಿ ಸುಮಾರು ಏಳು ಆನೆಗಳ ಹಿಂಡೊಂದು ಕಂಡು ಬಂದಿದ್ದು, ನದಿಯಲ್ಲಿ ಸ್ನಾನಕ್ಕೆಂದು ಬಂದಿದ್ದ ಯುವಕ ತಂಡ ಓಟಕ್ಕಿತ್ತ ಘಟನೆ ನಿನ್ನೆ ವರದಿಯಾಗಿದೆ.


ಕೊಯ್ನಾಡು ಸಮೀಪದ ಮಾಣಿ -ಮೈಸೂರು ಹೆದ್ದಾರಿ ಬಳಿ ಪಯಸ್ವಿನಿ ನದಿಯ ತೀರಕ್ಕೆ ಸ್ನಾನಕ್ಕೆಂದು ಕೆಲವು ಯುವಕರು ಬಂದಿದ್ದರು. ಈ ಸಂದರ್ಭದಲ್ಲಿ ಉನೈಸ್ ಪೆರಾಜೆ ಎಂಬವರು ನದಿಯ ತಟದಲ್ಲಿ ಯಾತ್ರಿಕರು ಬಂದು ಬಿಸಾಕಿದ್ದ ಕಸದ ವೀಡಿಯೋವನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಕಾಡಿನಿಂದ ಏಕಾಏಕಿ ಆನೆಗಳ ಹಿಂಡು ಇವರ ಬಳಿ ಬರುತ್ತಿದ್ದುದನ್ನು ಗಮನಿಸಿದರು. ಕೂಡಲೇ ಅವರು ಅಲ್ಲಿಂದ ಓಟಕ್ಕಿತ್ತರು. ನಂತರ ದೂರದಲ್ಲಿ ನಿಂತು ಆನೆಗಳ ಹಿಂಡಿನ ವೀಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.