ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ನಿಂದ ‘ಬಿ ಫ್ಲಸ್’ ಗ್ರೇಡ್

0

ಸುಳ್ಯದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ನಿಂದ ‘ಬಿ ಪ್ಲಸ್’ ಗ್ರೇಡ್ ಲಭಿಸಿದೆ.
ವಾರದ ಹಿಂದೆ ನ್ಯಾಕ್ ಅಧಿಕಾರಿಗಳು ಸುಳ್ಯ ಪ್ರಥಮ ದರ್ಜೆ ಕಾಲೇಜಿಗೆ ಬಂದು ಪ್ರಗತಿ ಪರಿಶೀಲನೆ ನಡೆಸಿ ತೆರಳಿದ್ದರು. ಇದೀಗ ಗ್ರೇಡ್ ಪ್ರಕಟಗೊಂಡಿದ್ದು ಸಂಸ್ಥೆಗೆ ಬಿ ಪ್ಲಸ್ ಗ್ರೇಡ್ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕೊಯಿಂಗಾಜೆ ತಿಳಿಸಿದ್ದಾರೆ.