*ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆ : ಕೃಷಿ‌ ಇಲಾಖೆ ಸೂಚನೆ*

0

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕಾ ಸೇವಾ ಕೆಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾ http://pmkisan.gov.in ಪೋರ್ಟಲ್ ನ ಪಾರ್ಮರ್ಸ್ ಕಾರ್ನರ್ ಮೂಲಕ ಆಧಾರ್ ಸಂಖ್ಯೆ ದಾಖಲಿಸಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ಕೇಂದ್ರ ಸರಕಾರವು ಸೂಚಿಸಿದ್ದು ಇ-ಕೆವೈಸಿ ಮಾಡದೇ ಇರುವ ರೈತರ ಆರ್ಥಿಕ ನೆರವು ಸ್ಥಗಿತಗೊಳಿಸಲಾಗುವುದು.ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಾಯಿಸಿಕೊಳ್ಳಲು ಬಾಕಿ ಇರುವ ರೈತರು ತಕ್ಷಣ ನೋಂದಾವಣೆ ಮಾಡಿಕೊಳ್ಳತಕ್ಕದ್ದು. ಈ ಕೆಳಕಂಡ ಪ್ರಮುಖ ಅಂಶಗಳನ್ನು ಒಳಗೊಂಡ ರೈತರು ಅರ್ಹರಾಗಿರುತ್ತಾರೆ.ಅರ್ಹ ಫಲಾನುಭವಿಗಳು ಜಂಟಿ ಖಾತೆದಾರರಾಗಿದ್ದು ಯೋಜನೆಯಡಿ ನೋಂದಾಯಿಸಿರುವುದಿಲ್ಲ.1.2.2019ರ ನಂತರ ಪೌತಿ ಕಾರಣದಿಂದಾಗಿ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು ಯೋಜನೆಯಡಿ ನೋಂದಾಯಿಸಿರುವುದಿಲ್ಲ. ಒಂದೇ ಕುಟುಂಬದ (ಅಂದರೆ ಗಂಡ, ಹೆಂಡತಿ ಹಾಗೂ ಅಪ್ರಾಪ್ತ ಮಕ್ಕಳು) ಸದಸ್ಯರೆಂದು ಭೂಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು, ಹಿರಿಯ ನಾಗರಿಕರು ಯೋಜನೆಯಡಿ ನೋಂದಾಯಿಸಿರುವುದಿಲ್ಲ. ಆದ್ದರಿಂದ ಮೇಲೆ ತಿಳಿಸಿದ ಅಂಶಗಳಲ್ಲಿ ಭೂಹಿಡುವಳಿ ಹೊಂದಿರುವವರು ಯೋಜನೆಯಡಿ ಅರ್ಹರಾಗಿರುತ್ತಾರೆ. ಇಂತಹ ರೈತರು ಪಿ.ಎಂ. ಕಿಸಾನ್ ಯೋಜನೆಯಡಿ ಅರ್ಜಿಯನ್ನು ನೀಡಿ ನೋಂದಾಯಿಸಿಕೊಳ್ಳಬೇಕಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.