ಡಾ. ಗೀತಾ ದೊಪ್ಪರಿಗೆ ಎರಡು ಐಎಂಎ ರಾಷ್ಟ್ರೀಯ ಅವಾರ್ಡ್

0

ಎ.ಎಂ.ಎಸ್ ರಾಜ್ಯಾಧ್ಯಕ್ಷೆ, ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಗೀತಾ ಜೆ ದೊಪ್ಪ ರವರಿಗೆ ಎರಡು ಐಎಂಎ ಅವಾರ್ಡ್ ಲಭಿಸಿದೆ.
ಸುರಕ್ಷಿತ ತಾಯ್ತನ ಯೋಜನೆ ಡಾ. ಕನಕ್ ಗೋಯೆಲ್ ಅವಾರ್ಡ್ ಮತ್ತು ಐಎಂಎ ಮಹಿಳಾ ವೈದ್ಯಕೀಯ ಅಪ್ರಿಶಿಯೇಷನ್ ಅವಾರ್ಡ್ ಲಭಿಸಿದ್ದು, ಡಿ. 27ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಐಎಂಎಯ 97ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ನಡೆಯಿತು.

ಭಾರತೀಯ ವೈದ್ಯಕೀಯ ಪರಿಷತ್ತಿನಲ್ಲಿ ಮಹಿಳಾ ವೈದ್ಯರ ವಿಭಾಗದ ರಾಜ್ಯಾಧ್ಯಕ್ಷರಾಗಿ ರಾಜ್ಯದಾದ್ಯಂತ ಸುಮಾರು 62 ಮಹಿಳಾ ವೈದ್ಯರ ಶಾಖೆಯನ್ನು ಸ್ಥಾಪಿಸುವಲ್ಲಿ ಡಾ ಗೀತಾ ಜೆ ದೊಪ್ಪರವರು ಪ್ರಮುಖ ಪಾತ್ರವಹಿಸಿರುವ ಡಾ ಗೀತಾ ಜೆ ದೊಪ್ಪರವರು ಭಾರತೀಯ ವೈದ್ಯಕೀಯ ಪರಿಷತ್ತಿನ ಅಕಾಡೆಮಿ ಆಫ್ ಮೆಡಿಕಲ್ ಸ್ಪೆಶಲಿಸ್ಟ್ಸನ ರಾಜ್ಯಾಧ್ಯಕ್ಷರಾಗಿ 2022-24ರ ಅವಧಿಗೆ ಚುನಾಯಿತರಾಗಿರುತ್ತಾರಲ್ಲದೆ 2022-23 ನೇ ಸಾಲಿಗೆ ಸೆಂಟ್ರಲ್ ವರ್ಕಿಂಗ್ ಕಮಿಟಿ ಶಾಶ್ವತ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರು ಮತ್ತು ಸುಳ್ಯ ಐಎಂಎ ಯ ಸ್ಥಾಪಕ ಅಧ್ಯಕ್ಷರಾದ ಡಾ ಚಿದಾನಂದರು ಡಾ. ಗೀತಾರ ಸಾಧನೆಗಾಗಿ ಅಭಿನಂದಿಸಿರುತ್ತಾರೆ.