ಸುಳ್ಯ ದೇವರಗುಂಡ ಮನೆತನದ ಹಿರಿಯರಿಗೆ
50ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ

0

ಡಿ.ಎಸ್.ಕುಶಾಲಪ್ಪ ದಂಪತಿ ಮತ್ತು ಡಾ.ಡಿ.ಎಸ್.ಶೇಷಪ್ಪ ದಂಪತಿಗಳಿಗೆ ಶುಭಾಶಯ ಕೋರಿದ ಬಂಧು- ಮಿತ್ರರು

ಸುಳ್ಯ ದೇವರಗುಂಡ ಮನೆತನದ ಡಿ.ಎಸ್. ಕುಶಾಲಪ್ಪ ಮತ್ತು ಶ್ರೀಮತಿ ಲೀಲಾ ಕುಶಾಲಪ್ಪ ದಂಪತಿಯ ಹಾಗೂ ಸಹೋದರ ಡಾ.ಡಿ.ಎಸ್.ಶೇಷಪ್ಪ ಮತ್ತು
ಶ್ರೀಮತಿ ಲೀಲಾ ಶೇಷಪ್ಪ ದಂಪತಿಗಳು ಮದುವೆ ದಿ‌ನದ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡರು.
ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅವರ ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು ಅವರ ಆಶೀರ್ವಾದ ಪಡೆದುಕೊಂಡರೆ, ಬಂಧುಗಳು,ನೆಂಟರಿಷ್ಟರು,ಹಿತೈಷಿಗಳು ದಾಂಪತ್ಯದ ಸುವರ್ಣ ಸಂಭ್ರಮಕ್ಕೆ ಶುಭ ಹಾರೈಸಿದರು.
ಕುಟುಂಬದ ಡಿ.ಎಸ್.ಗಿರೀಶ್ ಶುಭಹಾರೈಕೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದ ನಿಮಿತ್ತ ಬೆಳಗ್ಗೆ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಭೋಜನ ನಡೆಯಿತು.
ಮಕ್ಕಳಾದ ಡಿ.ಕೆ.ಸಂದೀಪ್, ಡಿ.ಕೆ.ಪ್ರದೀಪ್,ಡಾ.ಕೆ.ಜಯದೀಪ್,ಡಿ.ಎಸ್. ದಿವ್ಯಾನಂದ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದರು.