ರಾಷ್ಟ್ರದ ಉನ್ನತಿಯಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯ : ಡಾ. ಮಾಧವ ಭಟ್

0


ಸಮಾಜದ ಎಲ್ಲರ ಧ್ವನಿಯನ್ನು ಕೇಳುವವರಿರಬೇಕು. ನೋವಿಗೆ ಶಮನ ಮಾಡುವವರು ಇರಬೇಕು.ಇದು ಆರೋಗ್ಯವಂತ ಸಮಾಜದ ಲಕ್ಷಣ. ಭಾರತೀಯರಿಗೆ ಹಿಂದೆ ಹಿಂಜರಿಕೆಯ ಮನೋಭಾವವಿತ್ತು .ಈಗ ಭಾರತದಲ್ಲಿ ಜನಸoಖ್ಯೆ ಜಾಸ್ತಿ ಇದ್ದರೂ ಮಾನವ ಸಂಪನ್ಮೂಲವು ಸಾಧನೆಗಳ ಮೂಲಕ ವಿಶ್ವಕ್ಕೆ ಕೊಡುಗೆ ನೀಡುತ್ತಿದೆ. ನಮ್ಮ ದೇಶ ವಿವಿಧ ರಂಗಗಳಲ್ಲಿ ಜಗತ್ತಿನಲ್ಲಿ ಹೆಮ್ಮೆ ಪಡುವ ಸಾಧನೆಗೈಯುತ್ತಿದೆ.ಒಳ್ಳೆಯ ಕನಸುಗಳು ಒಳ್ಳೆಯ ಯೋಚನೆಗಳಿಗೆ ಪ್ರೇರಣೆ ನೀಡುತ್ತದೆ.ವಿದ್ಯಾರ್ಥಿಗಳು ಒಳ್ಳೆಯ ಕನಸುಗಾರರಾಗಿ ವಿಶ್ವಕ್ಕೆ ಕೊಡುಗೆ ನೀಡಿ.ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಶಿಕ್ಷಣವು ಸಮಾಜದ ಏಳಿಗೆಯಲ್ಲಿ ಮುಖ್ಯ ಪಾತ್ರ ವಹಿಸುವುದು ಡಾ.ಕೆವಿಜಿಯವರು 4ದಶಕಗಳ ಹಿಂದೆ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ
ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾ oಶುಪಾಲ ಡಾ. ಮಾಧವ ಭಟ್ ಹೆಚ್.ಹೇಳಿದರು. ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎ. ಓ.ಎಲ್. ಇ.(ರಿ )ಸುಳ್ಯ ಇದರ ಕಾರ್ಯದರ್ಶಿ ಕೆ.ವಿ.ಹೇಮನಾಥ್ ಅವರು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮುಖ್ಯ ಮುಂದಿನ ಜೀವನದ ತೀರ್ಮಾನ ನಾವು ನಿರ್ಧರಿಸಬೇಕು, ಇಷ್ಟ ಪಟ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಿದಾಗ ಯಶಸ್ಸು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ ಎಂ ಬಾಲಚಂದ್ರ ಗೌಡ, ಎನ್ನೆoಸಿ ಪ್ರಾoಶುಪಾಲ ಪ್ರೊ ರುದ್ರ ಕುಮಾರ್ ಎಂ ಎಂ.ಉಪಸ್ಥಿತರಿದ್ದರು.ವೇದಿಕೆಯಲ್ಲಿ ಪ.ಪೂ ವಿಭಾಗದ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ದಾಮೋದರ ಪಿ, ಸಾವಿತ್ರಿ ಕೆ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಧ್ಯಾನ್ ವಿಜಯ್, ದೀಕ್ಷಿತಾ ಆಚಾರ್, ಗೌತಮ್ ಪಿ, ಕೆ.ಪಿ ಮಹಮ್ಮದ್ ಅನಾಸ್ ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ನಿಶ್ವಿತಾ ಮತ್ತು ಬಳಗದವರು ಪ್ರಾರ್ಥಿಸಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ದಾಮೋದರ ಪಿ ಸ್ವಾಗತಿಸಿದರು. ಮುಖ್ಯ ಅತಿಥಿಗಳು ಜ್ಯೋತಿ ಪ್ರಜ್ವಲನೆ ನೆರವೇರಿಸಿದರು.

ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ವಾರ್ಷಿಕ ವರದಿ ವಾಚಿಸಿದರು. ಕಲಿಕೆ, ಸಾಂಸ್ಕೃತಿಕ,ಕ್ರೀಡಾ ವಿಜೇತರ ಬಹುಮಾನ ಪಟ್ಟಿಯನ್ನು ಉಪನ್ಯಾಸಕಿಯರಾದ ರೇಷ್ಮಾ ಎಂ ಎಂ, ಕು ಬೇಬಿ ವಿದ್ಯಾ ಪಿ.ಬಿ., ಶ್ರೀಮತಿ ರಾಜೇಶ್ವರಿ ಎ ವಾಚಿಸಿದರು.ದತ್ತಿ ನಿಧಿ ಬಹುಮಾನ ವಿಜೇತರ ಪಟ್ಟಿಯನ್ನು ಉಪನ್ಯಾಸಕಿ ಶ್ರೀಮತಿ ಗೀತಾ ಎನ್ ವಾಚಿಸಿದರು. .ಕಳೆದ ಬಾರಿಯ ಪಿಯುಸಿ ಪರೀಕ್ಷೆ ಯಲ್ಲಿ ರಾಜ್ಯ ಕ್ಕೆ ನಾಲ್ಕನೇ ಸ್ಥಾನ ಗಳಿಸಿದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸೌಮ್ಯ ಎಸ್. ಹಾಗೂ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾದ ವಿಖ್ಯಾತ್ ಎಸ್ ಮತ್ತು ರಾಜ್ಯ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ದ್ವಿತೀಯ ಕಲಾ ವಿಭಾಗದ ಮನು ಶ್ರೀನಿವಾಸ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಕೆ ವಂದಿಸಿದರು. ಎನ್ನೆ oಸಿಯ ನಿವೃತ್ತ ಪ್ರಾoಶುಪಾಲರಾದ ಡಾ ಪ್ರಭಾಕರ ಶಿಶಿಲ, ಡಾ ಪೂವಪ್ಪ ಕಣಿಯೂರು, ಕೆವಿಜಿ ನರ್ಸಿಂಗ್ ಪ್ರಾoಶುಪಾಲೆ ಪ್ರೇಮ, ಹಾಗೂ ಸಹ ಸಂಸ್ಥೆಗಳ ಉದ್ಯೋಗಿಗಳು,ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತ ರಿದ್ದರು.ಉಪನ್ಯಾಸಕರಾದ ವಿನಯ್ ನಿಡ್ಯಮಲೆ ಮತ್ತು ಶ್ರೀಮತಿ ಹರ್ಷಿತ ಎ.ಬಿ. ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮವನ್ನು ಗೌತಮ್ ಪಿ, ರಾಶಿ, ಅಕ್ಷಯ್ ಎಸ್ ರೈ ನಿರೂಪಿಸಿದರು.