ಸ್ಟ್ಯಾಂಡಿಂಗ್ ಬ್ರಾಡ್ ಜಂಪ್ ಸ್ಪರ್ಧೆಯಲ್ಲಿ ಕು. ಭಾನವಿ ಗೆ ರಜತ ಪದಕ

0

ದಕ್ಷಿಣ ಕನ್ನಡ ಜಿಲ್ಲಾ ಅತ್ಲೆಟಿಕ್ ಅಸೋಸಿಯೇಷನ್ ಆಯೋಜಿಸಿದ್ದ ದ.ಕ.ಜಿಲ್ಲಾ ಜ್ಯೂನಿಯರ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ -2022ರಲ್ಲಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿಯ 8 ನೇ ತರಗತಿ ವಿದ್ಯಾರ್ಥಿನಿ ಕು. ಭಾನವಿ.ಪಿ‌.ಎಸ್ 14 ರ ವಯೋಮಿತಿಯ ಬಾಲಕಿಯರ ಸ್ಟ್ಯಾಂಡಿಂಗ್ ಬ್ರಾಡ್ ಜಂಪ್ ವಿಭಾಗದಲ್ಲಿ ಸ್ಪರ್ಧಿಸಿ ರಜತ ಪದಕ ವಿಜೇತಳಾಗಿದ್ದಾಳೆ. ಈಕೆ ಕಳೆದ ನವೆಂಬರ್ ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೋಬಳಿ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿಕೊಂಡಿರುತ್ತಾಳೆ ಮತ್ತು ಜಿಲ್ಲಾ ಮಟ್ಟದಲ್ಲಿ ಕೂಡ ಪದಕ ವಿಜೇತಳಾಗಿದ್ದಳು.