ಸುಳ್ಯ ಶ್ರೀ ಚೆನ್ನಕೇಶವ ದೇವರ ಸಂಭ್ರಮದ ಜಾತ್ರೋತ್ಸವ

0

ಕುಕ್ಕನ್ನೂರು ದೈವಗಳ ಭಂಡಾರ ಆಗಮನ – ಧ್ವಜಾರೋಹಣ

ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ಬೆಳಿಗ್ಗೆ ಉಗ್ರಾಣ ಮುಹೂರ್ತದೊಂದಿಗೆ ಪ್ರಾರಂಭಗೊಂಡಿತು.


ಸಂಜೆ ನಾಲ್ಕು ಸ್ಥಾನಗಳ ದೈವಗಳ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ತರಲಾಯಿತು.


ನಂತರ ಕುಕ್ಕನ್ನೂರು ದೈವಗಳ ಭಂಡಾರ ಆಗಮನವಾಯಿತು.
ಬಳಿಕ ಧ್ವಜಾರೋಹಣ ನಡೆಯಿತು.


ನಂತರ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮತ್ತು ಸಮಿತಿ ಸದಸ್ಯರು ಹಾಗೂ ಗಿರಿಜಾಶಂಕರ ತುದಿಯಡ್ಕ, ಕೃಪಾಶಂಕರ ತುದಿಯಡ್ಕ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.