ನಗರದ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸರಕಾರದಿಂದ 60 ಕೋಟಿ ರೂ. ಮಂಜೂರು

0

ಸುಳ್ಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟು ದೊಡ್ಡ ಯೋಜನೆ ಮಂಜೂರು : ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸಂತಸ

ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಗೆ ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ 60 ಕೋಟಿ ರೂ. ಮಂಜೂರಾಗಿದ್ದು, ಇದು ಅತೀವ ಸಂತಸ ತಂದಿದೆ ” ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.


ಜನವರಿ 3 ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಯೋಜನೆಯ ಅನುದಾನವು ಅಮೃತ್ 2 ಯೋಜನೆಯಡಿಯಲ್ಲಿ ಮಂಜೂರಾಗಿದ್ದು ಈ ಸಮಿತಿ ಹಾಗೂ ತಾಂತ್ರಿಕ ಸಮಿತಿಯಲ್ಲಿ ಈಗಾಗಲೇ ಅನುಮೋದನೆಗೊಂಡಿರುತ್ತದೆ.ಎರಡು ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದ್ದು ಇದಕ್ಕೆ ನಮ್ಮ ನಗರ ಪಂಚಾಯತಿನ ವಿಪಕ್ಷ ಸದಸ್ಯರು ಸೇರಿದಂತೆ ಸರ್ವ ಸದಸ್ಯರುಗಳು ಸಂಪೂರ್ಣ ಸಹಕಾರದಿಂದನೀಡಿದ್ದಾರೆ ಎಂದು ಹೇಳಿದರು.


2008 ನೇ ಇಸವಿಯಿಂದ ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು 2014ರಲ್ಲಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳ ಹಿಂದೆ ನಮ್ಮ ಶಾಸಕರು ಮತ್ತು ಸಚಿವರ ನೇತೃತ್ವದಲ್ಲಿ ಸುಮಾರು 17 ಕೋಟಿ ರೂಗಳ ವೆಂಟೆಡ್ ಡ್ಯಾಂ ಕಾಮಗಾರಿ ಹಾಗು 2.5 ಕೋಟಿ ರೂಗಳ ಜಾಕ್‌ವೆಲ್ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಸುಳ್ಯದ ಜನತೆಯ ಅತಿ ಅವಶ್ಯಕವಾದ ಕುಡಿಯುವ ನೀರಿನ ಸಮಸ್ಯೆಗೆ ಅತಿ ಶೀಘ್ರವಾಗಿ ಪರಿಹಾರ ಕಾಣಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈಗಾಗಲೇ ನಿರ್ಮಾಣ ಹಂತದಲ್ಲಿರುವ ಪಯಸ್ವಿನಿ ವೆಂಟೆಡ್ ಡ್ಯಾಂನಿಮದ ಕುರುಂಜಿಗುಡ್ಡೆ, ಜಯನಗರ, ಬೋರಯಗುಡ್ಡೆ, ಕಲ್ಲುಮುಟ್ಲುಗಳಲ್ಲಿ ನೀರು ಸಂಗ್ರಹ ಮಾಡಿ ಸ್ಥಳೀಯ ಪ್ರದೇಶಗಳಿಗೆ ನೀರನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಹೇಳಿದರು. ಈ ಪ್ರದೇಶಗಳಲ್ಲಿ 5 ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ 2 ಮತ್ತು 2.5 ಲಕ್ಷ‌ ಲೀಟರ್ ಸಾಮರ್ಥ್ಯದ 3 ಟ್ಯಾಂಕ್ ನಿರ್ಮಾಣ ಆಗಲಿದ್ದು, ಅಲ್ಲಿಂದಲೇ ಸ್ಥಳೀಯ ಬೇರೆ ಬೇರೆ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು. ಈ ಎಲ್ಲ ಯೋಜನೆಯು ಮುಂದಿನ 30 ವರ್ಷಗಳನ್ನು ಮುಂದಿಟ್ಟು ರೂಪಿಸಲಾಗಿದ್ದು 38 ಸಾವಿರ ಜನರಿಗೆ ನೀರು ಸರಬರಾಜು ಮಾಡುವ ಸಾಮರ್ಥ್ಯ ಇದ್ದು, ವರ್ಷದೊಳಗೆ ಯೋಜನೆ ಪೂರ್ತಿಯಾಗಲಿದೆ ಎಂದು ಅವರು ಹೇಳಿದರು.

ನಗರದ ಕಸದ ಬಗ್ಗೆ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕಸದ ಬಗ್ಗೆ ಸಂಪೂರ್ಣವಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು, ವ್ಯವಸ್ಥೆಗಳನ್ನು ಮಾಡಲಾಗಿದ್ದು ಇದೀಗ ಸುಳ್ಯ ನಗರದ ಕಸದ ಸಮಸ್ಯೆ ಬಹುತೇಕ ಕಡಿಮೆ ಗೊಂಡಿರುತ್ತದೆ.


ಕಲ್ಚರ್ಪಯಲ್ಲಿ ಬರ್ನಿಂಗ್ ಮೆಷಿನ್ ಕಾರ್ಯ ಯಶಸ್ವಿಯಾಗಿದ್ದು ಜನವರಿ ಹತ್ತರಂದು ಇದರ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಂದು ಹೇಳಿದರು. ಸಚಿವರುಗಳಾದ ಎಸ್ ಅಂಗಾರ ಮತ್ತು ಸುನಿಲ್ ಕುಮಾರ್ ರವರು ಉದ್ಘಾಟನೆ ಮಾಡಲಿದ್ದು ಮಂದಿರ ದಿನಗಳಲ್ಲಿ 1,500 ಕೆಜಿ ಕಸ ಉರಿಸುವ ಕಾರ್ಯವನ್ನು ಯೋಜನೆಯಾಗಿ ರೂಪಿಸಲಾಗುವುದು ಎಂದು ಹೇಳಿದರು. ನಗರ ಪಂಚಾಯತ್ ಆವರಣದಲ್ಲಿ ಇರುವ ಕಸಗಳ ವಿಲೇವಾರಿ ಮಾಡಲು ಕ್ರಮ ಕೈಗೊಂಡಿದ್ದು ಈ ಹಿಂದೆ ನಿಗದಿಪಡಿಸಿದ ದರದಲ್ಲಿ ಟೆಂಡರ್ ಮುಂದುವರಿಸಲು ಆದೇಶ ಬಂದಿದ್ದು, ಕರೆಯಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ‌ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ಸದಸ್ಯರಾದ ಬುದ್ಧ ನಾಯ್ಕ್, ಸುಧಾಕರ ಕೆ. ಉಪಸ್ಥಿತರಿದ್ದರು.