ಸುಳ್ಯದ ಉದ್ಯಮಿ ಸ್ವಾತಿ ಸಿಟಿ ಲಾಡ್ಜ್ ಮಾಲಕ ಶ್ರೀಕೃಷ್ಣ ಸೋಮಯಾಗಿ ಯವರಿಗೆ ಮಾತೃ ವಿಯೋಗ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ದಿ.ಲಕ್ಷ್ಮೀ ನಾರಾಯಣ ಸೋಮಯಾಗಿ ಯವರ ಪತ್ನಿ ಶ್ರೀಮತಿ ರತ್ನಾವತಿ ಸೋಮಯಾಗಿ ಯವರು ಇಂದು ಸಂಜೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸುಳ್ಯದ ಅಕ್ಷಯ ಆರ್ಕೇಡ್ ಮಾಲಕ, ಪ್ರಗತಿಪರ ಕೃಷಿಕ ಶಿವಪ್ರಸಾದ್ ಸೋಮಯಾಗಿ ಮತ್ತು ಸುಳ್ಯದ ಸ್ವಾತಿ ಸಿಟಿ ಲಾಡ್ಜ್ ಮಾಲಕ ,ಶ್ರೀ ಗುರು ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ,ಇಬ್ಬರು ಪುತ್ರಿಯರಾದ ಶ್ರೀಮತಿ ಶ್ಯಾಮಲಾ ಕೇಕುಣ್ಣಾಯ, ಶ್ರೀಮತಿ ಕುಮಾರಿ ಕೆದಿಲಾಯ ಹಾಗೂ ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.