ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ವಿಕಲ ಚೇತನರ ವಿಶೇಷ ಗ್ರಾಮ ಸಭೆ

0

ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಜ.06 ರಂದು ವಿಕಲ ಚೇತನರ ವಿಶೇಷ ಗ್ರಾಮ ಸಭೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತ ಚಾಕೋಟೆ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು.
ತಾಲ್ಲೂಕು ಪಂಚಾಯತ್ ನ ವಿಕಲ ಚೇತನ ಇಲಾಖೆಯ ಮೇಲ್ವಿಚಾರಕ ಚಂದ್ರಶೇಖರ್.ಇಲಾಖೆಯ ಮಾಹಿತಿ ನೀಡಿದರು.


ನಗರ ವಿಕಲ ಚೇತನ ಇಲಾಖೆಯ ಮೇಲ್ವಿಚಾರಕರು ಹಾಗೂ ದ ಕ ಜಿಲ್ಲಾ. ಕಾರ್ಯಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್ ಮಾಹಿತಿ ಕಾರ್ಯಗಾರ ನಡೆಸಿದರು. ವಿಕಲ ಚೇತನರ ಇಲಾಖೆಯ ಸವಲತ್ತು ಗಳ ಬಗ್ಗೆ ತಿಳಿಸಿದರು.ಉಪಾಧ್ಯಕ್ಷೆ ತ್ರಿವೇಣಿ, ಪಿ ಡಿ .ಒ.ಹೂವಪ್ಪ ಗೌಡ ವೇದಿಕೆಯಲ್ಲಿದ್ದರು.
ವಿ ಆರ್. ಡಬ್ಲ್ಯೂ ಕೃಷ್ಣ ಪ್ರಸಾದ್, ಗ್ರಾಮ ಪಂಚಾಯತ್ ಸದಸ್ಯರುಗಳಾದ ರವೀಂದ್ರ ರೈ ಟಪ್ಪಾಲುಕಟ್ಟೆ, ರಮೇಶ್ ರೈ, ತಾರಾನಾಥ, ಆನಂದ್ ಪಂಜಿಗಾರು ಹರೀಶ್,ಸುಶೀಲ ಮತ್ತು ಆರೋಗ್ಯ ಇಲಾಖೆಯ ಸಿ ಚ್ ಓ ಅಕ್ಷತ, ಬ್ಯಾಂಕ್ ನ ಸುಜಾತಾ ಮತ್ತು ಎಲ್ಲಾ ವಿಕಲ ಚೇತನರು ಅವರ ಮನೆಯವರು ಮತ್ತು ಸಿಬ್ಬಂದಿಗಳು ಹಾಜರಿದ್ದರು, ಮೂರು ಜನ ಫಲಾನುಭವಿಗಳಾದ, ಆದರ್ಶ ನಮಿತಾ, ಅಪ್ಪು ಕುಂಞಿ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ಅಂಗವಿಕಲ ರ ಅನುದಾನದಲ್ಲಿ ಚೆಕ್ ವಿತರಿಸಲಾಯಿತು.
ಕುಮಾರಿ ಧನ್ಯ ಪ್ರಾರ್ಥಿಸಿ, ಕೃಷ್ಣ ಪ್ರಸಾದ್ ಸ್ವಾಗತಿಸಿ,ಗ್ರಾ ಪಂ ಸದಸ್ಯ.ರವೀಂದ್ರ ರೈ ಧನ್ಯವಾದವಿತ್ತರು.