ಕಾಂಚೋಡು ಜಾತ್ರೋತ್ಸವ ಬಗ್ಗೆ ಪೂರ್ವಭಾವಿ ಸಭೆ

0


ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಜಾತ್ರೋತ್ಸವ ಫೆ. 11ರಿಂದ 14ರ ತನಕ ಜರಗಲಿದ್ದು, ಈ ಬಗ್ಗೆ 2ನೇ ಪೂರ್ವಭಾವಿ ಸಭೆ ಜ. 11ರಂದು ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಪರಮೇಶ್ವರಯ್ಯ ಕಾಂಚೋಡು ವಹಿಸಿದ್ದರು.

ಧರ್ಮದರ್ಶಿ ಪರಶುರಾಮ ಕಾಯಾರ ದೊಡ್ಡಮನೆ, ಉತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಎಂ, ಕಾರ್ಯದರ್ಶಿ ರಾಧಾಕೃಷ್ಣ ಕೊಳೆಂಜಿಕೋಡಿ, ಆಡಳಿತ
ಸಮಿತಿಯ ಕಾರ್ಯದರ್ಶಿ ಶಂಕರನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಜಾಹ್ನವಿ ಕಾಂಚೋಡು ಸ್ವಾಗತಿಸಿದರು.