ಕೂತ್ಕುಂಜ : ಶ್ರೀದೇವಿ ಸಂಜೀವಿನಿ ಸಂಘ ಉದ್ಘಾಟನೆ

0

ಕೂತ್ಕುಂಜ ಗ್ರಾಮದ ಚಿದ್ಗಲ್ ನಲ್ಲಿ ಚಂದ್ರಾ ಹೊನ್ನಪ್ಪರವರ ಮನೆಯಲ್ಲಿ ಶ್ರೀದೇವಿ ಸಂಜೀವಿನಿ ಸಂಘ ಉದ್ಘಾಟನೆಯಾಯಿತು.

ಧರ್ಮ ಶ್ರೀ ನವೋದಯ ಸಂಘ ಚಿದ್ಗಲ್ ಇದರ ಹಿರಿಯ ಸದಸ್ಯರಾದ ತಿಮ್ಮಕ್ಕ ಆದಪ್ಪ ಚಿದ್ಗಲ್ ರವರು ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷರಾಗಿ ಚಂದ್ರಾ ಹೊನ್ನಪ್ಪ ಚಿದ್ಗಲ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವೇದಾವತಿ ಬಾಲಕೃಷ್ಣ ಚಿದ್ಗಲ್ ಹಾಗೂ ಖಜಾಂಜಿಯಾಗಿ ಚಂದ್ರಾ ಭಾಸ್ಕರ ಚಿದ್ಗಲ್ ಆಯ್ಕೆಯಾದರು. ಸದಸ್ಯರಾಗಿ ದೇವಕಿ ಚಿದ್ಗಲ್, ಸುಶೀಲ ಶೇಷವೇಣಿ ಕುಳ್ಳಜೆ, ವೀಣಾ ಇಟ್ಯಡ್ಕ , ಲತಾ ಚಿದ್ಗಲ್ ಬೇಬಿ ಚಿದ್ಗಲ್ , ಪದ್ಮಾವತಿ ಚಿದ್ಗಲ್ ಹೇಮಾವತಿ ಚಿದ್ಗಲ್ , ಸೀತಮ್ಮ ಚಿದ್ಗಲ್ , ವಿoದ್ಯಾ ಬಿಳಿಮಲೆ ಚಿದ್ಗಲ್, ಹರಿಣಿ ಕಾರ್ಜ ಚಿದ್ಗಲ್ ಆಯ್ಕೆಯಾದರು. ಪದ್ಮಾವತಿ ಚಿದ್ಗಲ್ ಪ್ರಾರ್ಥಿಸಿದರು. ಚಂದ್ರಾ ಹೊನ್ನಪ್ಪ ಚಿದ್ಗಲ್ ರವರು ಸ್ವಾಗತಿಸಿದರು ಮಹಿಳಾ ಮಂಡಲದ ಅಧ್ಯಕ್ಷೆ ಲತಾ ದಿನೇಶ್ ಚಿದ್ಗಲ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯದರ್ಶಿ ವೀಣಾ ಗಿರಿಧರ್ ಇಟ್ಯಡ್ಕ ವಂದಿಸಿದರು.

ಧರ್ಮಶ್ರೀ ಚಿದ್ಗಲ್ ಹಾಗೂ ದುರ್ಗಾ ಶ್ರೀ ರೈತ ಸಂಘದ ಸದಸ್ಯರಾದ ದಮಯoತಿ ಕಾರ್ಜ ಚಿದ್ಗಲ್ ರಾಜೀವಿ ಮತ್ತು ರೋಹಿಣಿ ಕುಳ್ಳಾಜೆ ಉಪಸ್ಥಿರಿದ್ದರು.