ಜ.21ರಂದು ಮಂಡೆಕೋಲು ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್

0

ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ತಿಂಗಳ 3ನೇ ಶನಿವಾರ “ವಿದ್ಯುತ್‌ ಅದಾಲತ್‌ ನಡೆಸುವಂತೆ ಸರಕಾರದಿಂದ ಆದೇಶಿಸಿದ್ದು, ಅದರಂತೆ ಪ್ರಸಕ್ತ ತಿಂಗಳ ಮೂರನೇ ಶನಿವಾರ ಜ. 21ರಂದು ಪೂರ್ವಹ್ನ 11:00 ಗಂಟೆಗೆ ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್‌ ಅದಾಲತ್ ನಡೆಸಲು ತಿರ್ಮಾನಿಸಲಾಗಿದ್ದು, ಸದರಿ ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ವಿದ್ಯುತ್‌ ಗ್ರಾಹಕರಿಗೆ ವಿದ್ಯುತ್‌ ಅದಾಲತ್ ಸದುಪಯೋಗ ಪಡೆದುಕೊಳ್ಳಬಹುದು.
ವಿದ್ಯುತ್‌ ಅದಾಲತ್ ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ನಡೆಯುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.