ಸನಿಹ ಶೆಟ್ಟಿಗೆ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ

0

ಕರ್ನಾಟಕ ರಾಜ್ಯ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಮೈಸೂರು,(MDSA) ಇದರ ವತಿಯಿಂದ ಆಯೋಜಿಸಲಾಗಿದ್ದ “ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್ ಷಿಪ್ ೨೦೨೨-೨೩” ಇದರಲ್ಲಿ ನಡೆದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಸುಳ್ಯದ ಸನಿಹಾ ಶೆಟ್ಟಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು, ಚೆನ್ನೈನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಭರತನಾಟ್ಯ ಸ್ಪರ್ಧೆಯಲ್ಲೂ ಸನಿಹಾ ದ್ವಿತೀಯ ಸ್ಥಾನ ಗಳಿಸಿದ್ದಳು.

ಸನಿಹಾ ಶೆಟ್ಟಿ, ಸಂಗೀತ ಮತ್ತು ಭರತನಾಟ್ಯ ಶಿಕ್ಷಕಿಯಾದ ವಿದುಷಿ
ಪ್ರಾಂಜಲಿ ಕಾನತ್ತೂರು ಶಿಷ್ಯೆಯಾಗಿದ್ದು, ಸುಳ್ಯದ ಚಂದ್ರಕಾಂತ್ ಶೆಟ್ಟಿ , ಉಷಾ ಸಿ. ಶೆಟ್ಟಿ ದಂಪತಿಯ ಪುತ್ರಿ.