ಪಂಜ ಲಯನ್ಸ್ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

0

ಪಂಜ ಲಯನ್ಸ್ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಅಧಿಕೃತ ಭೇಟಿ ಕಾರ್ಯಕ್ರಮ ಜ.20 ರಂದು ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾ ಮಂದಿರದಲ್ಲಿ ಜರಗಿತು.


ಮುಖ್ಯ ಅತಿಥಿಯಾಗಿ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಮಾತನಾಡಿ “ಪಂಜ ಲಯನ್ಸ್ ಕ್ಲಬ್ ಉತ್ತಮ ಅನೇಕ ಸೇವೆಗಳನ್ನು ಸಮಾಜಕ್ಕೆ ನೀಡಿದೆ. ಉತ್ತಮ ಅಧ್ಯಕ್ಷ ,ಸದಸ್ಯರ ಹೊಂದಿದ್ದು ‌ಕ್ರಿಯಾ ಶೀಲ ಸಂಸ್ಥೆಯಾಗಿ ಬೆಳೆದು ಬಂದಿದೆ” ಎಂದು ಹೇಳಿದರು ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರಾಂತೀಯ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ,ರೀಜನಲ್ ಚೇರ್ ಪರ್ಸನ್ ಡಾ.ಸಿದ್ದಲಿಂಗ,ಲಯನ್ಸ್ ಜಿಲ್ಲಾ ರಾಯಭಾರಿ ಮಾಧವ ಗೌಡ ಜಾಕೆ ಹಾಗೂ ಕ್ಲಬ್ ನ ನಿಕಟಪೂರ್ವಾಧ್ಯಕ್ಷ ಸಂತೋಷ್ ಜಾಕೆ, ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ, ಕೋಶಾಧಿಕಾರಿ ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು.


ಸೇವಾ ಚಟುವಟಿಕೆಗಳು: ಸಕಲೇಶಪುರದ ಮುಕ್ತಿಧಾಮಕ್ಕೆ ಪಂಜ ಲಯನ್ಸ್ ಕ್ಲಬ್ ವತಿಯಿಂದ ರೂ 20,000 ದೇಣಿಗೆ ಚೆಕ್ಕನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದರು.


ಶೌರ್ಯ ವಿಪತ್ತು ಪಂಜ ಘಟಕದ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ಸಂಸ್ಥೆ ಆಯೋಜಿಸಿದ ಚಿತ್ರಕಲಾ ಪೀಸ್ ಪೋಸ್ಟರ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಪ್ರಣಮ್ ಸಂಕಡ್ಕ ಮತ್ತು ಅವರಿಗೆ ತರಬೇತಿ ನೀಡಿದ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ರವರನ್ನು ಗೌರವಿಸಲಾಯಿತು.


ವಿಮಾ ಕ್ಷೇತ್ರದಲ್ಲಿ ಎಂ‌.ಡಿ.ಆರ್.ಟಿ ಸಾಧನೆ ಮಾಡಿ ಅಮೇರಿಕದಲ್ಲಿ ನಡೆಯುವ ಜಾಗತಿಕ ಮಟ್ಟದ ವಿಮಾ ಸಮ್ಮೇಳನದಲ್ಲಿ ಭಾಗವಹಿಸಲು ಅರ್ಹತೆ ಪಡೆದ ಕ್ಲಬ್ ನ ಸದಸ್ಯ, ಭಾರತೀಯ ಜೀವ ವಿಮಾ ಪ್ರತಿನಿಧಿ ವಾಸುದೇವ ಮೇಲ್ಪಾಡಿ , ಕನ್ನಡ ಕಿರುಚಿತ್ರ ‘ಕಲಹ’ ಇದರ ಪ್ರೊಡ್ಯೂಸರ್ ಕ್ಲಬ್ ನ ಸದಸ್ಯ ಮನು ಎಂ ಪಂಜರವರನ್ನು ಗೌರವಿಸಲಾಯಿತು. ಶೈಕ್ಷಣಿಕ ವಿಶೇಷ ಸಾಧನೆಗೆ ಕ್ಲಬ್ ನ ಸದಸ್ಯರ ಮಕ್ಕಳಾದ ಹರ್ಷಿತ್ ಎಣ್ಣೆಮಜಲು, ರಕ್ಷಾ ಕೆಮ್ಮೂರು, ಪ್ರಜ್ಞಾ ರವರನ್ನು ಗುರುತಿಸಲಾಯಿತು.


ಕಾರ್ಯಕ್ರಮದಲ್ಲಿ ಕುಸುಮಾಧರ ಕೆಮ್ಮೂರು ವೇದಿಕೆಗೆ ಆಹ್ವಾನಿಸಿದರು. ಆನಂದ ಜಳಕದಹೊಳೆ ಲಯನ್ಸ್ ಪ್ರಾರ್ಥನೆ ಮಾಡಿದರು. ಮೋಹನ್ ಕೂಟಾಜೆ ಧ್ವಜ ವಂದನೆ ಮಾಡಿದರು. ಪುರುಷೋತ್ತಮ ದಂಬೆಕೋಡಿ ಸ್ವಾಗತಿಸಿದರು.ವಿಶ್ವಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ನಾಗೇಶ್ ಕಿನ್ನಿಕುಮೇರಿ ವರದಿ ವಾಚಿಸಿದರು. ಪುರಂದರ ಪನ್ಯಾಡಿ, ದಿಲೀಪ್ ಬಾಬ್ಲುಬೆಟ್ಟು, ನೇಮಿರಾಜ ಪಲ್ಲೋಡಿ, ಕುಮಾರ ಸ್ವಾಮಿ ಕಿನ್ನಿಕುಮೇರಿ, ವಾಸುದೇವ ಮೇಲ್ಪಾಡಿ ಅತಿಥಿಗಳನ್ನು, ನೂತನ ಸದಸ್ಯರನ್ನು, ಗೌರವ ಸ್ವೀಕೃತರ ಸಭೆಗೆ ಪರಿಚಯಿಸಿದರು. ಕರುಣಾಕರ ಎಣ್ಣೆಮಜಲು ವಂದಿಸಿದರು.