ದುಗ್ಗಲಡ್ಕದಲ್ಲಿ ಏರ್ಟೆಲ್ ಟವರ್ ಕಾರ್ಯಾರಂಭ

0


ದುಗ್ಗಲಡ್ಕದಲ್ಲಿ ನೂತನವಾಗಿ ಏರ್ಟೆಲ್ ಟವರ್ ನಿರ್ಮಾಣಗೊಂಡಿದ್ದು ಜ.20ರಂದು ಕಾರ್ಯಾರಂಭಗೊಂಡಿದೆ.
ದುಗ್ಗಲಡ್ಕ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ತೀವ್ರವಾಗಿದ್ದುದರಿಂದ ವ್ಯವಹಾರಗಳಿಗೆ ಸಮಸ್ಯೆಯಾಗಿತ್ತು.ಅದರಲ್ಲೂ ವಿದ್ಯಾರ್ಥಿಗಳಿಗೆ,ವ್ಯಾಪಾರಸ್ಥರಿಗೆ ಭಾರೀ ತೊಂದರೆಯಾಗುತ್ತಿತ್ತು. ಸುಮಾರು ಎಂಟು ತಿಂಗಳ ಹಿಂದೆಯೇ ಜಗದೀಶ್ ಎಂಬವರ ಜಾಗದಲ್ಲಿ ಏರ್ಟೆಲ್ ಕಂಪೆನಿ ವತಿಯಿಂದ ಟವರ್ ನಿರ್ಮಿಸಲಾಗಿತ್ತು.ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಸಂಪರ್ಕ ನೀಡಿರಲಿಲ್ಲ. ಇದೀಗ ಸಂಪರ್ಕ ವ್ಯವಸ್ಥೆ ಸರಿಪಡಿಸಿ ಕಾರ್ಯಾರಂಭಗೊಂಡಿದೆ.ಉತ್ತಮ ರೇಂಜ್ ಇರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.