ಪಂಜ ಜಾತ್ರೆಗೆ ಗೊನೆ ಕಡಿಯುವ ಕಾರ್ಯಕ್ರಮ, ಫೆ.1.ರಂದು ರಾತ್ರಿ ಧ್ವಜಾರೋಹಣ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಕಡಿಯುವ ಕಾರ್ಯಕ್ರಮ ಜ.24.ರಂದು ವಿವಿಧ ವೈದಿಕ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.

ಕುದ್ವ ತೋಟದಲ್ಲಿ ಗೊನೆ ಕಡಿದು ಪೂರ್ವ ಸಂಪ್ರದಾಯದಂತೆ ಬ್ಯಾಂಡ್ ವಾಲಗ ಮೆರವಣಿಗೆ ಮೂಲಕ‌ ಶ್ರೀ ದೇವಾಲಯಕ್ಕೆ ಸಮರ್ಪಿಸಲಾಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿ ಬೈಲುಗುತ್ತು , ಸಲಹಾ ಸಮಿತಿಯ ಚಂದ್ರಶೇಖರ ಶಾಸ್ತ್ರಿ ಸಿ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ನಾರಾಯಣ ಗೌಡ ಕೋರ್ಜೆ, ಶಂಕರ್ ಕುಮಾರ್, ಲಕ್ಷ್ಮಣ ಗೌಡ ಆಕ್ರಿಕಟ್ಟೆ, ರಾಮಚಂದ್ರ ಭಟ್, ಶ್ರೀಮತಿ ಸೌಮ್ಯ ಪಿ ಆರ್ ಸಾಯಿಕೃಪಾ , ಮಾಜಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ,ಮಾಜಿ ಸದಸ್ಯ ಗಂಗಾಧರ ಗೌಡ ಗುಂಡಡ್ಕ,ಮಧ್ಯಸ್ಥ ತಿಮ್ಮಪ್ಪ ಗೌಡ ಪುತ್ಯ , ಉತ್ಸವ ಸಮಿತಿಯ ಸಂಚಾಲಕರು, ಸದಸ್ಯರು,ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಜ.26 ಮತ್ತು ಜ.29ರಂದು ಸೀಮೆಯ ಭಕ್ತರಿಂದ ಸಾಮೂಹಿಕ ಶ್ರಮದಾನ ಜರುಗಲಿದೆ.ಫೆ.1. ರಂದು ರಾತ್ರಿ ಧ್ವಜಾರೋಹಣ ನಡೆಯಲಿದೆ. ಫೆ.5 ರಂದು ಹಗಲು ಶ್ರೀ ದೇವರ ದರ್ಶನ ಬಲಿ.ಫೆ.6.ರಂದು ರಾತ್ರಿ ಶ್ರೀದೇವರ ಬ್ರಹ್ಮ ರಥೋತ್ಸವ ಜರುಗಲಿದೆ.