ಬಳ್ಪ :ಗಣರಾಜ್ಯೋತ್ಸವ ಆಚರಣೆ

0

ಬಳ್ಪ ಸ.ಉ.ಹಿ.ಪ್ರಾ.ಶಾಲೆಯಲ್ಲಿ
ಜ.26 ರಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷ ಉಮೇಶ್ ಬುಡೆಂಗಿ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರುಕ್ಮಿಣಿ ಹೊನ್ನಪ್ಪ ಗೌಡ ಅಡ್ತಲೆ,ಕಟ್ಟ ಲಿಂಗಪ್ಪ ಗೌಡ,ಚೆನ್ನಪ್ಪ ಮಾಸ್ತರ್,ಈಶ್ವರ ಗೌಡ ನೆಕ್ರಾಜೆ,ಮಾಧವ ಮೂಕಮಲೆ ಶಿಕ್ಷಕರು, ರುಕ್ಮಿಣಿ ಮಹಾಬಲ ಕುಳ ಇವರು ನೀಡಿರುವ ದತ್ತಿನಿಧಿಯನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,ಎಲ್ಲಾ ಎಸ್.ಡಿ.ಎಂ.ಸಿ.ಯವರು,ಪೋಷಕರು,ಶಿಕ್ಷಕ ವೃಂದ ,ಅಂಗನವಾಡಿ ಕಾರ್ಯಕರ್ತೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಚಂದ್ರಕಾಂತ ಮತ್ತು ತಂಡದವರು ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಿದರು.