ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ ಆಚರಣೆ

0

ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು.


ಧ್ವಜಾರೋಹಣ ವನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಜತೆ ಕಾರ್ಯದರ್ಶಿ ಶ್ಯಾಮ್ ಕುಮಾರ್ ಎಂ.ಎಸ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ, ಶಿಕ್ಷಕರಾದ ಜಯಲತಾ ಕೆ.ಆರ್, ಮೀನಕುಮಾರಿ.ಕೆ, ಶಿವಪ್ರಕಾಶ್. ಕೆ, ಸವಿತಾಕುಮಾರಿ, ಕುಮಾರ್ ಲಮಾಣಿ, ಸಿಬ್ಬಂದಿ ಬೇಬಿ.ಕೆ ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ.ಕೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಕುಸುಮಾವತಿ ಯು.ಪಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಸುಂದರ ಮಾಸ್ತರ್ ಕೇಪು ಭಾಗವಹಿಸಿದರು. ಶಿಕ್ಷಕರಾದ ಕುಮಾರ್ ಲಮಾಣಿ, ಶಿವಪ್ರಕಾಶ.ಕೆ ಗಣರಾಜ್ಯೋತ್ಸವ ಆಚರಣೆ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.