ಹತ್ತನೇ ತರಗತಿ ವಿದ್ಯಾರ್ಥಿ ವಿಹಾನ್ ಡೌರೆಯವರಿಂದ ಎನ್.ಎಂ.ಸಿಯಲ್ಲಿ “ಆಕಾಶ ಕಾಯದಲ್ಲಿ ಕಪ್ಪು ರಂಧ್ರದ” ಕುರಿತು ಅತಿಥಿ ಉಪನ್ಯಾಸ

0

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಭೌತಶಾಸ್ತ್ರ ಹಾಗೂ ಗಣಿತ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಜ.28 ರಂದು ” ಆಕಾಶ ಕಾಯದಲ್ಲಿ ಕಪ್ಪು ರಂಧ್ರ ” ಕುರಿತು ಅತಿಥಿ ಉಪನ್ಯಾಸ ವು ನಡೆಯಿತು.

ಆಸ್ಟ್ರೇಲಿಯಾದ ಮೆಲ್ಬರ್ನಿನ 10ನೇ ತರಗತಿಯ ವಿದ್ಯಾರ್ಥಿ 13 ವರ್ಷ ವಯಸ್ಸಿನ ವಿಹಾನ್ ಡೌರೆಯವರು ಉಪನ್ಯಾಸ ನೀಡಿದರು.

ಅತೀ ಎಳೆಯ ವಯಸ್ಸಿನಲ್ಲಿ ಕಪ್ಪು ರಂಧ್ರದ ಕುರಿತು ಅನ್ವೇಷಣೆ ಮಾಡಿ ತಿಳಿದುಕೊಂಡ ವಿಹಾನ್ ಇದು ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಕುರಿತಾಗಿ ವಿವರಿಸಿ ಅನುಭವವನ್ನು ಹಂಚಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ವಹಿಸಿದ್ದರು. ಬೌತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸತ್ಯಪ್ರಕಾಶ್ ಡಿ. ಸ್ವಾಗತಿಸಿ , ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಉಷಾ ಎಂ.ಪಿ. ಧನ್ಯವಾದ ಸಮರ್ಪಿಸಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಂ ಬಾಲಚಂದ್ರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಹಾನ್ ಡೌರೆಯವರು ಮೆನ್ಸಾ ಇಂಟರ್ನ್ಯಾಷನಲ್ ಇದರ ಸದಸ್ಯ ಹಾಗೂ ರೇಶ್ಮಾ ಮತ್ತು ರಾಘವೇಂದ್ರ ರಾವ್ ಇವರ ಸುಪುತ್ರ . ಪ್ರೊ.ಎಂ ಬಾಲಚಂದ್ರ ಗೌಡ ಮತ್ತು ಶ್ರೀಮತಿ ಕಮಲ ಬಾಲಚಂದ್ರ ಹಾಗೂ ಡಿ.ಪ್ರಭಾಕರ ರಾವ್ ಮತ್ತು ದಿ.ಶ್ಯಾಮಲ ರವರ ಮೊಮ್ಮಗ.

LEAVE A REPLY

Please enter your comment!
Please enter your name here