ತೊಡಿಕಾನ :ಅಡ್ಯಡ್ಕ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ವಾರ್ಷಿಕ ಮಹೋತ್ಸವ

0

ಪೋಲಿಸ್ ಅಧಿಕಾರಿ ಸುಕುಮಾರನ್ ಕೆ. ಯವರಿಗೆ ಹುಟ್ಟೂರ ಸನ್ಮಾನ

ತೊಡಿಕಾನ ಅಡ್ಯಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ 8ನೇ ಪ್ರತಿಷ್ಠಾ ವಾರ್ಷಿಕೋತ್ಸವವು ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.26 ರಂದು ವಿಜ್ರಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ 38 ವರ್ಷಗಳ ಕಾಲ ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜ. 31 ರಂದು ನಿವೃತ್ತರಾಗಲಿರುವ ಪೊಲೀಸ್ ಅಧಿಕಾರಿ ಸುಕುಮಾರನ್ ಕೆ. ರವರಿಗೆ
ಹುಟ್ಟೂರ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತೊಡಿಕಾನ ಶ್ರೀ ಮಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ರವರು ಮತ್ತು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಅಡಳಿತ ಸಮಿತಿ ಅದ್ಯಕ್ಷರಾದ ಅರ್ .ಸುಕುಮಾರನ್ ರವರೊಂದಿಗೆ ಗೌರವ ಸನ್ಮಾನವನ್ನು ನೆರವೇರಿಸಿದರು. ಎಲ.ಐ.ಸಿ. ವಿಮಾ ಪ್ರತಿನಿಧಿ ಶಂಕರಲಿಂಗಂ ರವರು ಸನ್ಮಾನ ಪತ್ರವನ್ನು ವಾಚಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ
ವಿಜಯರಾಜ್ PSI ಮಂಗಳೂರು ,
ಕುಮರೇಶನ್ PSI ಮಂಗಳೂರು, ಶಿವಕುಮಾರ್ ಕೂಟೇಲು TFF ಮಂಗಳೂರು, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ, ಸುಕುಮಾರ್ ರವರ ಪತ್ನಿ ಶ್ರೀಮತಿ ಸೆಲ್ಟಿ ಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಉಳುವಾರು ಕಿಶೋರ್ ಕುಮಾರ್ ರವರು ಗ್ರಾಮೀಣ ಪ್ರದೇಶದಲ್ಲಿ ಜನಿಸಿ ತನ್ನ ಸಾಧನೆಯಿಂದ ಇಂದು ಉನ್ನತ ಅಧಿಕಾರಿಯಾಗಿ ಗುರುತಿಸಿಕೊಂಡು ಊರಿಗೆ ಹೆಮ್ಮೆ ತಂದು ಕೊಟ್ಟಿರುವುದು ಅಭಿನಂದನೀಯ. ಅಧಿಕಾರಿ ಎಂಬ ದರ್ಪವಿಲ್ಲದೆ ಸರಕಾರಿ ಉದ್ಯೋಗದಲ್ಲಿದ್ದರೂ ಕೂಡ ಅವರು ಗ್ರಾಮೀಣ ಪ್ರದೇಶದ ಅವಿನಾಶ್ ಬಸ್ಸಿನಲ್ಲಿ ಬಂದಿರುವುದು ತನ್ನ ಸರಳತೆಯನ್ನು ಮೆರೆದು ಮಾದರಿ ವ್ಯಕ್ತಿತ್ವವನ್ನು ಬಿಂಬಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಆ್ಯಂಟನಿರಾಜ್ ಮಂಗಳೂರು ಮತ್ತು ಶ್ರೀಮತಿ ಮುತ್ತುಕುಮಾರಿ ಯವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನದಾಸನ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.