ಫೆ.12 ರಂದು ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಶ್ರೀ ದೈವಗಳ ಕಾಲಾವಧಿ ನೇಮೋತ್ಸವ

0

ಸುಳ್ಯ ಗಾಂಧಿನಗರದ ನಾವೂರು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಕಲ್ಕುಡ ಕಲ್ಲುರ್ಟಿ ಹಾಗೂ ಶ್ರೀ ಗುಳಿಗ ದೈವಗಳ ನೇಮೋತ್ಸವವು ಫೆ.12 ರಂದು ನಡೆಯಲಿರುವುದು. ಪ್ರಾತ:ಕಾಲ ಗಂಟೆ 6.00 ರಿಂದ ಮಧ್ಯಾಹ್ನ ಗಂಟೆ 1.00 ರ ತನಕ ನೇಮೋತ್ಸವವು ನಡೆಯಲಿದ್ದು ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು. ಹರಕೆಯ ಅಗೇಲು ಸೇವೆ ಫೆ.19 ಮತ್ತು ಮಾ.12 ರಂದು ಎರಡು ದಿವಸ ನಡೆಯಲಿದ್ದು ಅಗೇಲು ಸೇವೆ ಕೊಡಲು ಇಚ್ಚಿಸುವ ಭಕ್ತರು ಫೆ.11 ಮತ್ತು 12 ರಂದು ದೈವಸ್ಥಾನದಲ್ಲಿ ರಶೀದಿ ಪಡೆದುಕೊಳ್ಳಬೇಕು. ಹೊರತು ಅಗೇಲು ಸೇವೆ ನಡೆಯುವ ದಿನದಂದು ರಶೀದಿ ನೀಡಲಾಗುವುದಿಲ್ಲ ಎಂದು ಆಡಳಿತ ಧರ್ಮದರ್ಶಿ ಪಿ.ಕೆ.ಉಮೇಶ್ ರವರು ತಿಳಿಸಿರುತ್ತಾರೆ.