ಸವಿತಾ ಸುರೇಶ್ ಕೇಪುಳು ನಿಧನ

0

ಪುತ್ತೂರಿನ ಕೇಪುಳು ನಿವಾಸಿ ದಿ.ಸುರೇಶ್ ಕೆ.ಯವರ ಧರ್ಮಪತ್ನಿ ಶ್ರೀಮತಿ ಸವಿತಾರವರು ನಿನ್ನೆ ರಾತ್ರಿ ಹೃದಯಾಘಾತದಿಂದ ಸುಳ್ಯದಲ್ಲಿ ನಿಧನರಾದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಸುರೇಶ್ ರವರು ಕಳೆದ ಜೂನ್ ತಿಂಗಳಲ್ಲಿ ನಿಧನರಾದ ಬಳಿಕ ಬೆಂಗಳೂರಿನಲ್ಲಿರುವ ಎರಡನೇ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ಎರಡು ದಿನದ ಹಿಂದೆ ಬೆಂಗಳೂರಿನಿಂದ ಬಂದಿದ್ದ ಅವರು ಪುತ್ತೂರಿನನೆಗೆ ಬಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿದ್ದ ಕಾರ್ಯಕ್ರಮದಲಲಿ ಭಾಗವಹಿಸಿ, ಫೆ.5 ರಂದು ಅಪರಾಹ್ನ ಸುಳ್ಯ ಬೀರಮಂಗಲದಲ್ಲಿರುವ ತನ್ನ ಹಿರಿಯ ಪುತ್ರಿಯ ಮನೆಗೆ ಬಂದಿದ್ದರು.


ಸಣ್ಣಗೆ ಜ್ವರ ಬಂದುಕೊಂಡಿದ್ದ ಅವರಿಗೆ ರಾತ್ರಿ ಅಸೌಖ್ಯ ತೀವ್ರಗೊಂಡಾಗ ಕೆ.ವಿ.ಜಿ.ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ತಲುಪುವ ವೇಳೆಗೆ ತೀವ್ರ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪುತ್ರಿಯರಾದ ಸುಪ್ರಿತಾ ಅಜಿತ್ ಬಿ.ಟಿ., ಸುಷ್ಮಾ ಅನೀಶ್ ಬೆಂಗಳೂರು, ಅಸಳಿಯಂದಿರು, ಮೊಮ್ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ.

ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಬೀರಮಂಗಲದ ಮನೆಯಲ್ಲಿ ನೆರವೇರಿಸಿ, ಪುತ್ತೂರಿಗೆಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here