ಎಡಮಂಗಲ ಜಾತ್ರೋತ್ಸವ ಆರಂಭ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 13 ರಂದು ತಂತ್ರಿಗಳ ಆಗಮನದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದೆ.

ಪೂರ್ವಶಿಷ್ಟ ಸಂಪ್ರದಾಯದಂತೆ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳ ಅಂಗವಾಗಿ ಸಾಯಂಕಾಲ ಧ್ವಜಾರೋಹಣಗೊಂಡು ಶ್ರೀದೇವರ ಬಲಿ ಹೊರಟು, ಉತ್ಸವ, ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಸೀತಾರಾಮಯ್ಯ ನೂಚಿಲ, ಅರ್ಚಕರುಗಳಾದ ರಮೇಶ್ ನೂಚಿಲ, ಶ್ಯಾಂ ಕಿಶೋರ್ ನೂಚಿಲ, ಸಮಿತಿ ಸದಸ್ಯರುಗಳಾದ ರಾಮಕೃಷ್ಣ ರೈ ಮಾಲೆಂಗ್ರಿ, ಭವಾನಿ ಚಂದ್ರಶೇಖರ ಪರ್ಲ, ಗಿರೀಶ್ ನಡುಬೈಲು, ರವೀಂದ್ರ ದೇರಳ, ದೇವಿಪ್ರಸಾದ್ ದೋಲ್ಪಾಡಿ, ಬಾಲಕೃಷ್ಣ ಬಳಕ್ಕಬೆ, ಪ್ರಿಯಾಂಕಾ ಪದ್ಮನಾಭ ಪುಂಚತ್ತಡಿ ಹಾಗೂ ನಾಲ್ಕು ಗ್ರಾಮ, ಒಂಬತ್ತು ಉತ್ತರ ಕೂಡುಕಟ್ಟು ಭಕ್ತಾದಿಗಳು ಉಪಸ್ಥಿತರಿದ್ದರು.
(ವರದಿ ಎ ಎಸ್ ಎಸ್ ಅಲೆಕ್ಕಾಡಿ)