ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರಂತೋಡು ಗ್ರಾ.ಪಂ. ಆಯ್ಕೆ

0


ಕರ್ನಾಟಕ ಸರಕಾರದಿಂದ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯಿತಿಗೆ ನೀಡಲಾಗುವ ಗಾಂಧಿ ಗ್ರಾಮ ಪುರಸ್ಕಾರವು ೨೦೨೧ ೨೨ನೇ ಸಾಲಿಗೆ ಸಂಬಂಧಿಸಿದ ಹಾಗೆ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.


ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿ ಮತ್ತು ಆರೋಗ್ಯಕರ ಆಡಳಿತದ ಅಂಶಗಳ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ನಿರ್ವಹಣೆಯಲ್ಲಿ ಬಾಣಂತಿಯರ ,ಮಕ್ಕಳ ಮತ್ತು ದುರ್ಬಲ ವರ್ಗದವರ ರಕ್ಷಣೆಯಲ್ಲಿ ಲಸಿಕೆ ಮತ್ತು ಇತರ ಆರೋಗ್ಯ ಚಟುವಟಿಕೆಗಳ ಕುರಿತು ಕೈಗೊಂಡ ಕ್ರಮಗಳು, ಗ್ರಾಮ ಪಂಚಾಯಿತಿನ ತೆರಿಗೆ ವಸೂಲಾತಿಯಲ್ಲಿ ಗಮನಾರ್ಹ ಬೆಳವಣಿಗೆ, ತೆರಿಗೆಯ ಆನ್ಲೈನ್ ಪಾವತಿ, ಸೋಲಾರ್ ಅಳವಡಿಕೆ, ಘನ ತ್ಯಾಜ್ಯ ಘಟಕದ ನಿರ್ವಹಣೆ, ಅಮೃತ ಉದ್ಯಾನವನ ಸ್ಮಶಾನ ನಿರ್ಮಾಣದ ವಿಶೇಷ ಚಟುವಟಿಕೆಗಳು, ಉದ್ಯೋಗ ಖಾತ್ರಿ ಯೋಜನೆಯ ಯಶಸ್ವಿ ಅನುಷ್ಠಾನ, ಶಾಲೆಗಳು ಅಂಗನವಾಡಿಗಳ ಯಶಸ್ವಿ ನಿರ್ವಹಣೆ, ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗಳು ಮತ್ತು ಇತರ ಸಮಿತಿ ಸಭೆಗಳ ಅನುಷ್ಠಾನ, ಸಕಾಲದಲ್ಲಿ ಗ್ರಾಮ ಪಂಚಾಯತಿ ಸೇವೆಗಳ ನಿರ್ವಹಣೆ, ಬೀದಿ ದೀಪಗಳು ಕುಡಿಯುವ ನೀರು ಮತ್ತು ಸರಕಾರದ ೧೫ನೇ ಹಣಕಾಸು ವಸತಿ ಯೋಜನೆಗಳ ಯಶಸ್ವಿ ಅನುಷ್ಠಾನ, ಗ್ರಾಮ ಪಂಚಾಯತಿಯ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಳ್ಳುವ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳನ್ನು ಪರಿಗಣಿಸಿ, ಅರಂತೋಡು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ.