2.80 ಕೋಟಿ ವೆಚ್ಚದಲ್ಲಿ ಸುಳ್ಯದಲ್ಲಿ ಮಾಡಲಾದ ಒಳಚರಂಡಿ ರಿಪೇರಿಗೆ ರೂ.4 ಕೋಟಿಯ ಪ್ರಸ್ತಾವನೆ : ನಗರ ಪಂಚಾಯತ್ ಸಾಮಾನ್ಯ ಸಭೆ

0

ಕುದ್ಪಾಜೆಯಲ್ಲಿ ಪ್ರೆಸ್ಟೇಜ್ ಬೋರ್‌ವೆಲ್‌ಗೆ ಸಂದಾನ ಸೂತ್ರ

ಸುಳ್ಯ ನಗರ ಪಂಚಾಯತ್ ನ ಸಾಮಾನ್ಯ ಸಭೆಯು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರ ಅಧ್ಯಕ್ಷತೆಯಲ್ಲಿ ನ.ಪಂ. ಸಭಾಂಗಣದಲ್ಲಿ ಇಂದು ನಡೆಯಿತು. ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಪೂಜಿತಾ ಕೆ.ಯು., ಸುಶೀಲ ಜಿನ್ನಪ್ಪ, ಬುದ್ಧ ನಾಯ್ಕ್ ಜಿ, ಸುಧಾಕರ ಕುರುಂಜಿಭಾಗ್, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ ಶಾಂತಿನಗರ, ನಾಮನಿರ್ದೇಶಿತ ಸದಸ್ಯರುಗಳಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ ಇದ್ದರು.


ಸುಳ್ಯದ ರಥಬೀದಿಯಲ್ಲಿ ಸರ್ವೋದಯ ಪ್ರೆಸ್ ನ ಬಳಿಯಲ್ಲಿ ಕೊಳಚೆ ನೀರು ಹೋಗುತ್ತಿದೆ. ಒಳ ಚರಂಡಿಯಲ್ಲಿ ಹೋಗಬೇಕಾದ ನೀರು ಹೊರ ಚರಂಡಿಯಲ್ಲಿ ಹರಿಯುತ್ತಿದೆ. ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ? ಎಂದು ಸದಸ್ಯ ಎಂ.ವೆಂಕಪ್ಪ ಗೌಡರು ಕೇಳಿದಾಗ, ನಗರದ ಒಳಚರಂಡಿ ಯೋಜನೆ ಸರಿಯಾಗಿಲ್ಲ. ಸುಳ್ಯದ ಆರ್.ಐ. ಕಚೇರಿ ಬಳಿ ಬ್ಲಾಕ್ ಆಗಿದೆ. ತಾಲೂಕು ಪಂಚಾಯತ್, ಜೂನಿಯರ್ ಕಾಲೇಜು, ಕೇರ್ಪಳ ರಸ್ತೆ ಒಳಚರಂಡಿ ಮ್ಯಾನ್‌ಹೋಲ್ ಬ್ಲಾಕ್ ಆಗಿದೆ ಎಂಬ ಮಾಹಿತಿ. ಸನ್ನಿಧಿ ಹೋಟೆಲ್ ಎದುರಿನ ಮ್ಯಾನ ಹೋಲ್ ಜಜ್ಜಿದ ರೀತಿಯಲ್ಲಿ ಆಗಿ ಎಂದು ಒಳಚರಂಡಿ ಯೋಜನೆಯ ಕುರಿತು ಸಭೆಗೆ ವಿವರ ನೀಡಿದರು.
ಅಧ್ಯಕ್ಷರೆ ಒಳಚರಂಡಿ ಮಂಡಳಿಯವರನ್ನು ಕರೆದು ಸಭೆ ಮಾಡಬೇಕೆಂದು ನಾವು ಹೇಳಿzವೆ ಯಾಕೆ ಕರೆಯುತ್ತಿಲ್ಲ . ೨ ಕೋಟಿ ೮೦ ಲಕ್ಷದಲ್ಲಿ ಆಗಿರುವ ಕಾಮಗಾರಿ ಇದು ಎಂದು ವೆಂಕಪ್ಪ ಗೌಡರು ಹೇಳಿದರು. ಇಲ್ಲಿಯ ಒಳಚರಂಡಿ ಯೋಜನೆ ಸರಿ ಇಲ್ಲ. ಅದು ರಿಪೇರಿ ಆಗಬೇಕಿದೆ. ಅದಕ್ಕಾಗಿ ರೂ.೪ ಕೋಟಿ ಎಸ್ಟಿಮೇಟ್ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಾಧಿಕಾರಿ ವಿವರ ನೀಡಿದರು. ಒಳಚರಂಡಿ ಮಂಡಳಿಯವರ ಬರಲು ಹೇಳಿzವೆ ಬಂದಿಲ್ಲ ಎಂದು ಅಧ್ಯಕ್ಷರು ಹೇಳಿದಾಗ,ಲೋಕಾಯುಕ್ತಕ್ಕೆ ಬರೆಯಿರಿ. ಅವರು ಬಂದೇ ಬರುತ್ತಾರೆ” ಎಂದು ವೆಂಕಪ್ಪ ಗೌಡರು ಸಲಹೆ ನೀಡಿದರು.
ಸುಳ್ಯದ ಕುದ್ಪಾಜೆಯಲ್ಲಿ ಬೋರ್‌ವೆಲ್ ಕೊರೆಸಲು ನಾಮನಿರ್ದೇಶಿತ ಸದಸ್ಯರು ಆಕ್ಷೇಪಿಸುತ್ತಿದ್ದಾರೆಂದು ಆ ವಾರ್ಡ್ ಸದಸ್ಯ ಬಾಲಕೃಷ್ಣ ಭಟ್ ಹೇಳಿದಾಗ, ಬಾಲಕೃಷ್ಣ ಭಟ್‌ರು ಎರಡು ಇಂಚು ನೀರು ಇರುವಲ್ಲಿ ಬೋರ್ ಕೊರೆಸಲು ಹೇಳುತ್ತಿದ್ದಾರೆ.. ೫ ಇಂಚು ನೀರು ಸಿಗುವಲ್ಲಿ ಕೊರೆಸಬೇಕೆಂದು ನಾವು ಹೇಳುತ್ತಿzವೆ. ಅಲ್ಲಿಯ ಜನರ ಬೇಡಿಕೆಯೂ ಅದೇ. ಜನರಿಗೆ ದೀರ್ಘ ಕಾಲ ನೀರು ಸಿಗಬೇಕೆನ್ನುವುದು ನಮ್ಮ ಕೋರಿಕೆ ಎಂದು ನಾಮ ನಿರ್ದೇಶಿತ ಸದಸ್ಯ ರೋಹಿತ್ ಕೊಯಿಂಗೋಡಿ ಹೇಳಿದರು. ಬಾಲಕೃಷ್ಣ ಭಟ್ ಹಾಗೂ ರೋಹಿತ್ ರವರ ಮಾತಿನ ಬಳಿಕ ಮಾತನಾಡಿದ ಸದಸ್ಯ ಎಂ.ವೆಂಕಪ್ಪ ಗೌಡರು ಇದು ಪ್ರೆಸ್ಟೇಜ್ ಗಾಗಿ ಹೀಗೆ ಆಗುತ್ತಿದೆ ಎಂದು ನಮಗನಿಸುತ್ತಿದೆ. ಆದ್ದರಿಂದ ಇದನ್ನು ಅಲ್ಲಿ ಹೋಗಿ ಸಂದಾನ ರೂಪದಲ್ಲಿ ಮುಗಿಸೋಣ ಎಂದು ಸಲಹೆ ನೀಡಿದರು. ‘`ನಾವು ಬೋರ್‌ವೆಲ್ ಲಾರಿ ತರಿಸುತ್ತೇವೆ. ಈ ಎರಡೂ ಪಾಯಿಂಟ್ ಬಿಟ್ಟು ನೀರು ಇರಬಾಹುದಾಗ ಮತ್ತೊಂದು ಪಾಯಿಂಟ್ ಗೊತ್ತು ಮಾಡಿ ಬೋರ್ ಕೊರೆಸೋಣ ಎಂದು ಅಧ್ಯಕ್ಷ ವಿನಯ ಕಂದಡ್ಕರು ಸಲಹೆ ನೀಡಿದರು.
ಶರೀಫ್ ಕಂಠಿ ಮಾತನಾಡಿ, “ನಾವೂರಿನಲ್ಲಿ ಕಾಂಕ್ರೀಟ್ ರಸ್ತೆ ನಡುವಿನಲ್ಲೇ ನೀರು ಹೋಗುತ್ತಿದೆ. ಪಕ್ಕದಲ್ಲಿ ಹೊಸ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮತ್ತು ರಸ್ತೆಯ ಪಕ್ಕದಲ್ಲಿ ಇರುವ ವಿದ್ಯುತ್ ಕಂಬ ತೆರವು ಮಾಡಬೇಕು. ನನ್ನ ವಾರ್ಡ್‌ಗೆ ಸಂಬಂಧಿಸಿ ಸುಮಾರು ೧೦ ಕ್ಕೂ ಅಧಿಕ ಕಂಬಗಳು ರಸ್ತೆ ಮಾರ್ಜಿನ್‌ನಲ್ಲಿದೆ ಎಂದು ಅವರು ಹೇಳಿದರು.


ಬೂಡು ವಾರ್ಡ್‌ನಲ್ಲಿ ಅಂಗಡಿಮಠ ಎಂಬಲ್ಲಿ ರಸ್ತೆ ಅಭಿವೃದ್ಧಿಗೆ ಅಲ್ಲಿಯ ವರು ಬೇಡಿಕೆ ಇಟ್ಟಿದ್ದರು. ಇದೀಗ ಅನುದಾನ ಇರಿಸಿ ಟೆಂಡರ್ ಆದ ಬಳಿಕ ಅಲ್ಲಿಯವರು ರಸ್ತೆ ಬೇಡ ಎಂದು ಹೇಳುತ್ತಿದ್ದಾರೆ ಎಂದು ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ ಹೇಳಿದರು. ”ಅಲ್ಲಿಯ ವಿಚಾರ ನನಗೂ ಗೊತ್ತಿದೆ. ಅವರು ಹೇಳಿದರೆ ಕೇಳೋದಿಲ್ಲ” ಎಮದು ಅಧ್ಯಕ್ಷ ವಿನಯ ಕಂದಡ್ಕ ಹೇಳಿದರು.