ಸಂಪಾಜೆ : ಪಯಸ್ವಿನಿ ಸೊಸೈಟಿಯಲ್ಲಿ ಮಾಹಿತಿ ಕಾರ್ಯಾಗಾರ

0


ಗ್ರಾಮೀಣ ಜನತೆ ,ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ತಿಳುವಳಿಕೆ ಮೂಡಿಸಲು ಮಾಹಿತಿ ಕಾರ್ಯಾಗಾರವನ್ನು, ನಬಾರ್ಡ್ ಆಶ್ರಯದಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಮತ್ತು ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಸಹಯೋಗದಲ್ಲಿ ಫೆ. ೧೫ ರಂದು ಪಯಸ್ವಿನಿ ಸೊಸೈಟಿಯ ಬಾಲಂಬಿ ಶಾಖೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಅದ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷ ಅನಂತ್ ಊರುಬೈಲು ರವರು ಜ್ಯೋತಿ ಬೆಳಗುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು.
ನಬಾರ್ಡ್ ನ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳಾದ ವಿ.ರಮೇಶ್ ಬಾಬುರವರು ಗ್ರಾಮೀಣ ಜನತೆಗೆ ನಬಾರ್ಡ್ ಮೂಲಕ ಗ್ರಾಮೀಣ ಅಭಿವೃದ್ಧಿಯ ಭಾಗವಾಗಿ ಕೈಗೊಂಡ ವಿಮಾ ಸೌಲಭ್ಯಗಳು ,ಆರ್ಥಿಕ ಭದ್ರತೆಯ ಬಗ್ಗೆ ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತೆಯ ಬಗ್ಗೆ ಕೊಡಗು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ರವರು ಮತ್ತು ಡಿಜಿಟಲ್ ಬ್ಯಾಂಕಿಂಗ್ ಮತ್ತು ಉಳಿತಾಯ ,ಮಿತವ್ಯಯದ ಬಗ್ಗೆ ಕೆಡಿಸಿಸಿ ಬ್ಯಾಂಕ್ ಅಧಿಕಾರಿಗಳಾದ ಶಶಿಕುಮಾರ್ ರವರು ಸವಿಸ್ತಾರವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ರಾಜಾರಾಮ ಕೆ.ಆರ್ ,ಸಂಘದ ನಿರ್ದೇಶಕರು ,ಸಹಕಾರಿ ಗಣ್ಯರು ,ಸ್ವಸಹಾಯ ಗುಂಪು ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.


ಪಯಸ್ವಿನಿ ಸೊಸೈಟಿ ಸಿಇಒ ಬಿ.ಕೆ. ಆನಂದ ಸ್ವಾಗತಿಸಿ ,ಕೆಡಿಸಿಸಿ ಮಾರುಕಟ್ಟೆ ಅಧಿಕಾರಿ ನವೀನ್ ನಂಜಪ್ಪ ವಂದಿಸಿದರು.