ಆಲೆಟ್ಟಿ ಸದಾಶಿವ ದೇವರ ಜಾತ್ರೋತ್ಸವ -ವಸಂತ ಕಟ್ಟೆ ಪೂಜೆ ,ವಿಶೇಷವಾಗಿ ನೃತ್ಯ ಬಲಿ ಉತ್ಸವ

0

ಆಲೆಟ್ಟಿ ಶ್ರೀ ಸದಾಶಿವ ದೇವರ ಜಾತ್ರೋತ್ಸವದ ಮೂರನೇ ದಿನದಂದು ರಾತ್ರಿ ಶ್ರೀ ದೇವರ ಬಲಿ ಉತ್ಸವ ಹಾಗೂ ವಿಶೇಷವಾಗಿ ದೇವರಿಗೆ ವಸಂತ ಕಟ್ಟೆ ಪೂಜೆ ಮತ್ತು ನೃತ್ಯ ಬಲಿ ಉತ್ಸವ ಜರುಗಿತು. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಉತ್ಸವವನ್ನು ಕಣ್ತುಂಬಿಕೊಂಡರು. ಆಗಮಿಸಿದ ಸರ್ವರಿಗೂ ರಾತ್ರಿ ಅನ್ನ ಸಂತರ್ಪಣೆ ವಿತರಣೆಯಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಎಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.