ಕುಂಬ್ರಚೋಡು ನಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

0


ಕುಂಬ್ರಚೋಡುವಿನ ಮಸೀದಿಯ ಹಿಂಭಾಗದ ಮನೆಗಳಿಗೆ ಸಂಪರ್ಕಿಸುವ ಗ್ರಾಮಪಂಚಾಯತ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆಯು ಇಂದು ನಡೆಯಿತು.

ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಂ. ಬಾಬುರವರು ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ, ಗ್ರಾಮ ಪಂಚಾಯತ್ ಸದಸ್ಯರಾದ ಮುಜೀಬ್, ಗ್ರಾಮ ಪಂಚಾಯತಿಗೆ ರಸ್ತೆಯನ್ನು ದಾನವಾಗಿ ನೀಡಿದ ಅಬೂಬಕ್ಕರ್ ಹಾಜಿ, ಮಸೀದಿ ಅಧ್ಯಕ್ಷ ಹಾಜಿ ಹನಿಫ್ ಕೆ ಎಂ, ಮಸೀದಿಯ ಕಾರ್ಯದರ್ಶಿ ಕಾದರ್ ಅಕ್ಕರೆ ,
ಸ್ಥಳೀಯರಾದ ಅಬ್ದುಲ್ ಗಫೂರ್, ಅಬ್ದುಲ್ ಖಾದರ್, ಹಾಜಿ ಮೋಹಿದೀನ್, ಕುಂಚಾಮು, ಅಬ್ದುಲ್ಲ,
ಕಾಂಟ್ರಾಕ್ಟರ್ ತಾಜುದ್ದೀನ್ ಅಜ್ಜಾವರ ಮೊದಲದಾವರು ಇದ್ದರು.