ಬೆಳ್ಳಾರೆ ಶಾಲಾ ಕುಡಿಯುವ ನೀರಿನ ಬಾವಿಗೆ ಪ್ರಾಣಿ ಬಿದ್ದು‌ ಮೃತ್ಯು

0

ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ‌ ಕುಡಿಯುವ ನೀರಿನ ಬಾವಿಗೆ 5 ದಿನಗಳ ಹಿಂದೆ ಪ್ರಾಣಿಯೊಂದು ಬಿದ್ದು ಸತ್ತಿರುವುದು ಕಂಡುಬಂದಿದೆ. ಸತ್ತಿರುವ ಪ್ರಾಣಿ ನಾಯಿ ಅಥವಾ ಆಡು ಎಂದು ಶಂಕಿಸಲಾಗಿತ್ತು. ರಿಕ್ಷಾ ಚಾಲಕರು ಬಾವಿಯಲ್ಲಿ ಪ್ರಾಣಿಗಳ ಕಳೇಬರ ಇರುವುದನ್ನು ಗಮನಿಸಿ ಸ್ಥಳೀಯಾಡಳಿತದ ಗಮನಕ್ಕೆ ತಂದ ಮೇರೆಗೆ ಇವತ್ತು ಸತ್ತ ನಾಯಿಯ ದೇಹವನ್ನು ಮೇಲಕ್ಕೆತ್ತಲಾಯಿತೆಂದು ತಿಳಿದುಬಂದಿದೆ