ಸುಳ್ಯ ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲಾ ಪೋಷಕರ ಸಭೆ

0

ಸುಳ್ಯದ ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲೆಯ ಪೋಷಕರ ಸಭೆಯು ಫೆ. 23ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾದರ್ ವಿಕ್ಟರ್ ಡಿಸೋಜಾ ರವರು ವಹಿಸಿ ಮುಂದಿನ ವರ್ಷದ ಶೈಕ್ಷಣಿಕ ವಿಚಾರದ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ತಿಳಿಸಿದರು.

ಅತಿಥಿಗಳಾಗಿ ಪೂರ್ವ ಪ್ರಾಥಮಿಕ ಪೋಷಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಡಾ. ಅನುರಾಧಕುರಂಜಿಯವರು ಉಪಸ್ಥಿತರಿದ್ದು ಅವರು ಮಕ್ಕಳ ಮೇಲೆ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದರು. ವಾರ್ಷಿಕ ವರದಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯದರ್ಶಿ ಸಹ ಶಿಕ್ಷಕಿ ಶ್ರೀಮತಿ ಮಮತಾ ವಾಚಿಸಿದರು. ಶಾಲೆಯ ನೀತಿ ನಿಯಮಾವಳಿಗಳ ಬಗ್ಗೆ ಸಹ ಶಿಕ್ಷಕಿ ಶ್ರೀಮತಿ ಆಶಾರವರು ಪೋಷಕರಿಗೆ ತಿಳಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮಾ ರವರು ಎಲ್ಲರನ್ನು ಸ್ವಾಗತಿಸಿದರು. ವಂದನಾರ್ಪಣೆಯನ್ನು ಶಿಕ್ಷಕಿ ಶ್ರೀಮತಿ ಮರಿಯಾ ಕ್ರಾಸ್ತಾ ರವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಕವಿತಾ ಡಿಸೋಜ ರವರು ನಡೆಸಿಕೊಟ್ಟರು. ಎಲ್ ಕೆ ಜಿ , ಯು ಕೆ ಜಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.