ಅರಂತೋಡು :ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ

0

ಅರಂತೋಡು ಗ್ರಾಮದ ಅಡ್ತಲೆ, ಗೊರಸಿನಕೋಡಿ, ಮೇಲಡ್ತಲೆ, ದೊಡ್ಡಡ್ಕ ಪಂಚಾಯತ್ ರಸ್ತೆಗೆ ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಆರಂತೋಡು ಗ್ರಾಮ ಪಂಚಾಯತ್ ನ ಸುಮಾರು 13.5ಲಕ್ಷ ದ ಕಾಂಕ್ರಿಟೀಕರಣ ಕಾಮಗಾರಿಗೆ ಸುಳ್ಯ ಬಿ. ಜೆ. ಪಿ. ಮಂಡಲ ಸಮಿತಿ ಅಧ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿಯವರು ಫೆ. 28ರಂದು ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಉಪಾಧ್ಯಕ್ಷೆ ಕು. ಶ್ವೇತಾ ಅರಮನೆಗಯ, ಮಂಡಲ ಸಮಿತಿ ಮಹಿಳಾ ಮೋರ್ಚಾ ದ ಪ್ರದಾನ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್,ಪಂಚಾಯತ್ ಸದಸ್ಯೆ ಶ್ರೀಮತಿ ಸುಜಯ ಲೋಹಿತ್,ನಿವೃತ್ತ ಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆ, ಚಿದಾನಂದ ಮಾಸ್ತರ್ ಅಡ್ತಲೆ, ಗಣೇಶ್ ಮಾಸ್ತರ್ ಅಡ್ತಲೆ,ರಬ್ಬರ್ ಬೆಳೆಗಾರರ ಸಂಘ ದ ಅಧ್ಯಕ್ಷರಾದ ಶಶಿಕುಮಾರ್ ಉಳುವಾರು, ಬೆಳ್ಳಿಪಾಡಿ ಕೃಷ್ಣಪ್ಪ ಗೌಡ, ಮತ್ತು ಆರಂತೋಡು ಮೂರನೇ ವಾರ್ಡ್ ನ ಬಿ. ಜೆ. ಪಿ. ಕಾರ್ಯಕರ್ತರು, ರಸ್ತೆಯ ಪಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆರಂತೋಡು ಗ್ರಾಮ ಪಂಚಾಯತ್ ಸದಸ್ಯರು, ಆರಂತೋಡು ಶಕ್ತಿ ಕೇಂದ್ರದ ಪ್ರಮುಖರಾದ ಕೇಶವ ಅಡ್ತಲೆ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಪ್ರಭಾಕರ ಅಡ್ತಲೆ, ಜಗದೀಶ್ ಬೆಳ್ಳಿಪಾಡಿ ಮತ್ತು ಗಿರಿಪ್ರಕಾಶ್ ಕಲ್ಲುಗದ್ದೆ ಸಿಹಿತಿಂಡಿ ಮತ್ತು ಪಾನೀಯದ ವ್ಯವಸ್ಥೆ ಮಾಡಿದರು.