ಅರಂತೋಡು ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

0

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇಲ್ಲಿ ವಿಜ್ಞಾನ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬನ ಇವರು ನೆರವೇರಿಸಿ ಶುಭ ಹಾರೈಸಿದರು.

ವಿಜ್ನಾನ ಶಿಕ್ಷಕಿ ಶ್ರೀಮತಿ ಉಮಾವತಿ ಯವರು ವಿಜ್ಞಾನ ದಿನಾಚರಣೆಯ ಮಹತ್ವದ ಕುರಿತಾಗಿ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕಿಯರಾದ ಶ್ರೀಮತಿ ಸರಸ್ವತಿ, ಶ್ರೀಮತಿ ಶಾರದಾ, ಶ್ರೀಮತಿ ಭಾನುಮತಿ, ಶ್ರೀಮತಿ ಅಶ್ವಿನಿ ಉಪಸ್ಥಿತರಿದ್ದರು.6ನೇ ತರಗತಿ ವಿದ್ಯಾರ್ಥಿನಿ ನವ್ಯ ಪಿ ಜಿ ಸ್ವಾಗತಿಸಿ, ಲಿಖಿತ್ ಎ ಬಿ ಕಾರ್ಯಕ್ರಮ ನಿರೂಪಿಸಿದರು.