ಮಾ. 4: ಕೊಡಿಯಾಲ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ 48ನೇ ವಾರ್ಷಿಕೋತ್ಸವ

0

ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕೊಡಿಯಾಲ, ಕಲ್ಲಗದ್ದೆ ಇದರ 48ನೇ ವಾರ್ಷಿಕೋತ್ಸವ ಮಾ. 4ರಂದು ಜರಗಲಿದ್ದು, ಇದರ ಅಂಗವಾಗಿ ಜ. 26ರಿಂದ ನಗರಭಜನೆಗೆ ಆರಂಭಗೊಂಡಿತ್ತು.
ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರತೀವರ್ಷ ಕೊಡಿಯಾಲ ಗ್ರಾಮದ ಪ್ರತೀ ಮನೆಗಳಿಗೆ ತೆರಳಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಾ. 4ರಂದು ಭಜನಾ ಸಮಾರೋಪ ನಡೆಯಲಿದೆ. ಸಂಜೆ 5.45 ಕ್ಕೆ ಹರಿಹರೇಶ್ವರ ಭಜನಾ ಮಂಡಳಿ ಹರಿಹರ ಇದರ ಅಧ್ಯಕ್ಷ ಶ್ರೀಮತಿ ರಾಜೇಶ್ವರಿ ಶಿವರಾಮ್ ಕೊಲ್ಲಮೊಗ್ರ, ಸುಳ್ಯ ಗೀತಾಂಜಲಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷ ಶ್ರೀಮತಿ ಹರ್ಷಾ ಕರುಣಾಕರ, ವಿಷ್ಣುಪ್ರಿಯ ಭಜನಾ ಮಂಡಳಿ ಸವಣೂರು ಇದರ ಅಧ್ಯಕ್ಷೆ ಶ್ರೀಮತಿ ಕೆ ಪೂರ್ಣಿಮಾ, ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಅಧ್ಯಕ್ಷ ಶ್ರೀಮತಿ ಶಮಿತಾ ಪಿ ಮತ್ತು ಪೀರುವಾಜೆ ಶ್ರೀ ಜಲದುರ್ಗಾದೇವಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಉಮೇಶ್ ಭಜನಾ ಜ್ಯೋತಿ ಬೆಳಗಿಸಲಿದ್ದಾರೆ. ಸಂಜೆ ಗಂಟೆ 7.00ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ತಾ. ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಪುಲಸ್ಯ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸವಣೂರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಬಿ.ಕೆ ಇಂದಿರಾ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ರೋಟರಿ ಶಾಲಾ ಶಿಕ್ಷಕಿ ಶ್ರೀಮತಿ ನಾಳಿನಾಕ್ಷಿ ವಿ. ಆಚಾರ್ಯ ಕಲ್ಮಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕೊಡಿಯಾಲ ಶಾಲಾ ಎಸ್. ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಲಲಿತ ವಿ ಶೆಟ್ಟಿ, ಕೊಡಿಯಾಲ ಗ್ರಾ. ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ವಸಂತಿ ವಿ. ಪೈ ಬಾಚೋಡಿ, ಸುಳ್ಯ ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಹರ್ಷಾ ಕರುಣಾಕರ, ಹರಿಹರೇಶ್ವರ ಭಜನಾ ಮಂಡಳಿ ಅಧ್ಯಕ್ಷ ಶ್ರೀಮತಿ ರಾಜೇಶ್ವರಿ ಶಿವರಾಮ್, ಕೊಡಿಯಾಲ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ ಪೆರಿಯಾಣ, ಕೊಡಿಯಾಲ ಗ್ರಾ ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ನಾಗವೇಣಿ, ಮಾಜಿ ಸದಸ್ಯೆ ಶ್ರೀಮತಿ ರಮಾ ಪಿ.ರೈ, ಶ್ರೀ ಕ್ಷೇತ್ರ ಧ. ಗ್ರಾ. ಯೋ. ಕೊಡಿಯಾಲ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ರಾಜಮ್ಮ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಸಂಜೆ ಗಂಟೆ 6.00ರಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ರಾತ್ರಿ 9:15 ರ ನಂತರ ಮಂಗಳಾರತಿ ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಾ. 5ರಂದು ಬೆಳಿಗ್ಗೆ 6:15ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ ಎಂದು ಭಜನಾ ಮಂಡಳಿಯ ಅಧ್ಯಕ್ಷ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ತಿಳಿಸಿದ್ದಾರೆ.