ಕುಂಬಳಚೇರಿ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವಕ್ಕೆ ಕ್ಷಣಗಣನೆ

0

ನಾಳೆಯಿಂದ ಮೂರು ದಿನಗಳ ಕಾಲ ಅಪೂರ್ವವಾದ ದೈವಗಳ ದಿವ್ಯ ದರ್ಶನ

ಕೇಸರಿ ತಳಿರು,ತೋರಣ- ದ್ವಾರಗಳಿಂದ ಶೃಂಗಾರಮಯವಾದ ಪೆರಾಜೆ ಗ್ರಾಮ

ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎನ್ನಬಹುದಾದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ನಾಳೆಯಿಂದ ಆರಂಭಗೊಂಡು ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.


ಅಪೂರ್ವವಾದ ಈ ಮಹಾ ಉತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಪೆರಾಜೆ, ಸುತ್ತ ಮುತ್ತಲ ಪ್ರದೇಶಗಳನ್ನು ತಳಿರು,ತೋರಣ, ಬಂಟಿಂಗ್ಸ್ ಗಳಿಂದ ಶೃಂಗರಿಸಲಾಗಿದೆ. ಅಲ್ಲಲ್ಲಿ ಪ್ರವೇಶ ದ್ವಾರ, ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ದೈವಸ್ಥಾನದ ಎದುರುಭಾಗದಲ್ಲಿ ವಿಶಾಲವಾದ ಶಾಮಿಯಾನ ಹಾಕಲಾಗಿದ್ದು, ದೈವಗಳ ವೀಕ್ಷಣೆಗೆ ಅನುಕೂಲವಾಗುವಂತೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇರುವುದರಿಂದ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.ನಿರಂತರ ಅನ್ನದಾನ ಇರುವುದರಿಂದ ಕುಂಬಳಚೇರಿ ಶಾಲಾ ಮೈದಾನದಲ್ಲಿ ಸಾರ್ವಜನಿಕರಿಗೆ ಊಟ,ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.


ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಧಾನ ಸಮಿತಿ, ಉಪಸಮಿತಿಯವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.


ನಾಳೆ (ಮಾ.3) ಬೆಳಿಗ್ಗೆ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಿಂದ ಹಸಿರುವಾಣಿ ಮೆರವಣಿಗೆಯೊಂದಿಗೆ ದೈವಂಕಟ್ಟು ಮಹೋತ್ಸವ ಆರಂಭಗೊಳ್ಳಲಿದೆ.ಬಳಿಕ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 8.30ಕ್ಕೆ ದೈವಗಳ ಕೂಡುವಿಕೆ, ರಾತ್ರಿ 2 ರಿಂದ ನಡೆಯುವ ಶ್ರೀ ಪೊಟ್ಟನ್ ದೈವದ ನಡಾವಳಿಯೊಂದಿಗೆ ಎರಡು ದಿನಗಳ ಕಾಲ ಹಲವಾರು ದೈವಗಳ ನಡಾವಳಿಗಳು ನಿರಂತರವಾಗಿ ನಡೆಯಲಿದೆ.