ಸುಳ್ಯ ತಹಶೀಲ್ದಾರ್ ಆಗಿ ಜಿ.ಮಂಜುನಾಥ ನೇಮಕ

0

ಸುಳ್ಯ ತಹಶೀಲ್ದಾರ್ ಆಗಿ ಜಿ.ಮಂಜುನಾಥ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ ಕಛೇರಿಯ ಜಾರಿದಳ ವಿಭಾಗದಲ್ಲಿ ತಹಶೀಲ್ದಾರ್ ಆಗಿದ್ದ ಮಂಜುನಾಥ ಅವರನ್ನು ಖಾಲಿ ಇರುವ ಸುಳ್ಯ ತಾಲೂಕು ಗ್ರೇಡ್ 1 ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡಿ ಸರಕಾರ‌ ಆದೇಶಿಸಿದೆ. ಸುಳ್ಯ ತಹಶೀಲ್ದಾರ್ ಆಗಿದ್ದ ಅನಿತಾಲಕ್ಷ್ಮಿ ಅವರು ವರ್ಗಾವಣೆ ಆದ ಹಿನ್ನಲೆಯಲ್ಲಿ ಸುಳ್ಯ ತಹಶೀಲ್ದಾರ್ ಹುದ್ದೆ ಖಾಲಿಯಾಗಿತ್ತು