ಮಾ. 11-12 : ದೊಡ್ಡಡ್ಕದಲ್ಲಿ ಆದಿ ಬ್ರಹ್ಮಮೊಗೇರ್ಕಳ ನೇಮೋತ್ಸವ

0


ಗೂನಡ್ಕದ ದೊಡ್ಡಡ್ಕ ರಾಜಾರಾಂಪುರದ ಶ್ರೀ ಆದಿ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ 42ನೇ ವರ್ಷದ ನೇಮೋತ್ಸವವು ಮಾ. 11 ಮತ್ತು 12ರಂದು ನಡೆಯಲಿದೆ.


ಮಾ. 11ರಂದು ಬೆಳಿಗ್ಗೆ ಸ್ಥಳ ಶುದ್ಧೀಕರಣ, ಅಪರಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ 9ರಿಂದ ಮೊಗೇರ್ಕಳ ದೈವ ಗರಡಿ ಇಳಿಯುವುದು, 12ಕ್ಕೆ ತನ್ನಿಮಾನಿಗ ಗರಡಿ ಇಳಿಯುವುದು, ಬಳಿಕ ಬಟ್ಟಲು ಕಾಣಿಕೆ, ಹೂವಿನ ಹಾರ ಸಮರ್ಪಣೆ, ರಾತ್ರಿ 2.30ಕ್ಕೆ ಮೊಗೇರ ಪೂಜಾರಿಗಳ ದರ್ಶನ ಸವಾರಿ, ಹರಿಕೆ, ಪ್ರಸಾದ ವಿತರಣೆ, ಮಾ. 12ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಬಳಿಕ ಪ್ರಸಾದ ವಿತರಣೆ ನಡೆಯಲಿದೆ.