ಭಿಕ್ಷಾಟನೆ ಮಾಡಿ ರಸ್ತೆ ಮಾಡಿದರೆ ಇತಿಹಾಸ

0


ಸುಳ್ಯಕ್ಕೆ ಅನುದಾನ ಕೊಡುವುದೂ ಕಡಿಮೆ ಆದಂತಾಗ್ತದೆ


ಕೊಡಿಯಾಲಬೈಲು – ದುಗಲಡ್ಕ ರಸ್ತೆ ಭಿಕ್ಷಾಟನೆಯ ಪ್ರತಿಭಟನೆಗೆ ಹರೀಶ್ ಕಂಜಿಪಿಲಿ ಪ್ರತಿಕ್ರಿಯೆ

ಭಿಕ್ಷಾಟನೆ ಮಾಡಿ ರಸ್ತೆ ನಿರ್ಮಿಸಿದರೆ ಇತಿಹಾಸ ನಿರ್ಮಿಸಿದಂತಾಗುತ್ತದೆ. ಅಂಗಾರರಿಗೂ ಸುಳ್ಯಕ್ಕೆ ಅನುದಾನ ಕೊಡುವುದು ಕಡಿಮೆ ಆದಂತಾಗ್ತದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಮಾ.೯ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಸುಳ್ಯ - ಕೊಡಿಯಾಲಬೈಲು - ದುಗಲಡ್ಕ ರಸ್ತೆ ಅಭಿವೃದ್ಧಿಗಾಗಿ ಭಿಕ್ಷಾಟನೆಯ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿರುವ ಕುರಿತು ಪ್ರಶ್ನಿಸಿದಾಗ, ಉತ್ತರಿಸಿದ ಹರೀಶ್ ಕಂಜಿಪಿಲಿಯವರುನನ್ನ ರಾಜಕೀಯ ಜೀವನ ಆರಂಭವಾಗಿ 23 ವರ್ಷ ಆಯಿತು. ಭಿಕ್ಷಾಟನೆ ಮಾಡಿ ರಸ್ತೆ ಮಾಡಿದವರನ್ನು ನಾನು ಇದುವರೆಗೆ ನೋಡಿಲ್ಲ. ರಸ್ತೆ ಆಗಬೇಕೆಂದು ಮಾರ್ಗದ ಫಲಾನುಭವಿಗಳು ದುಡ್ಡು ಹಾಕಿ ರಸ್ತೆ ಮಾಡಿದ್ದು ಇದೆ. ಭಿಕ್ಷಾಟನೆ ಮಾಡಿ ರಸ್ತೆ ಮಾಡಿದ್ದು ಗೊತ್ತಿಲ್ಲ. ಇಲ್ಲಿ ಆದರೆ ಇತಿಹಾಸ ಆಗುತ್ತದೆ. ದೊಡ್ಡ ರಸ್ತೆ. ಅಂಗಾರರಿಗೂ ಸುಳ್ಯಕ್ಕೆ ಅನುದಾನ ಕೊಡಲು ಕಡಿಮೆ ಆದಂತಾಗುತ್ತದೆ ಎಂದು ಹೇಳಿದರು.

`’ಆ ರಸ್ತೆಗೆ ಈಗಾಗಲೇ ಸಚಿವ ಅಂಗಾರರು ಅನುದಾನ ಇರಿಸಿದ್ದಾರೆ. ಅನುದಾನ ಇಟ್ಟ ಮೇಲೆ ಒಂದಷ್ಟು ಪ್ರೊಸಿಜರ್ ಇದೆ. ಟೆಂಡರ್, ವರ್ಕ್ ಆರ್ಡರ್ ಇದೆಲ್ಲವೂ ಇದೆ. ಆ ಭಾಗದ ಫಲಾನುಭವಿಗಳು ಸೇರಿದ್ದ ಸಭೆಗೆ ನಾನು ಹೋಗಿದ್ದೆ. ೫೦ ಲಕ್ಷ ರೂ ಕೆಲಸ ಆಗುತ್ತದೆ ಎಂದು ಹೇಳಿದ್ದೆವು. ಅದರಂತೆ ಸ್ವಲ್ಪ ತಡವಾದರೂ ಕೆಲಸ ಆಗಿದೆ. ಈಗಲೂ ಅನುದಾನ ಇದೆ. ಅದರಲ್ಲಿ ಕೆಲಸ ಆಗಿಯೇ ಆಗುತ್ತದೆ” ಎಂದವರು ಹೇಳಿದರು.


ಸಚಿವ ಎಸ್.ಅಂಗಾರರು ಮಾತನಾಡಿ ದುಗಲಡ್ಕ – ಕೊಯಿಕುಳಿ ರಸ್ತೆಗೆ ಸೇತುವೆ ಇರಲಿಲ್ಲ. ಕಾಂಗ್ರೆಸ್ ಎಂ.ಎಲ್.ಎ. ಶಂಕುಸ್ಥಾಪನೆ ಮಾಡಿದ್ದರು. ಆದರೆ ಸೇತುವೆ ಮಾಡಿದ್ದು ಮಾತ್ರ ಬಿಜೆಪಿ. ಆಗ ಯಾಕೆ ಜನಗಳು ಭಿಕ್ಷಾಟನೆ ಮಾಡಿ ಸೇತುವೆ ಮಾಡಿಲ್ಲ ಎಂದು ಪ್ರಶ್ನಿಸಿದರು.


ಕೊಡಿಯಾಲಬೈಲು -ದುಗಲಡ್ಕ ರಸ್ತೆಯಲ್ಲಿ ೫೦ ಲಕ್ಷ ರೂ ವೆಚ್ಚದಲ್ಲಿ ಕೆಲಸ ಆಗಿದೆ. ಇನ್ನೂ ೨೫ ಲಕ್ಷದ ಕಾಂಕ್ರೀಟೀಕರಣ ಆಗಲು ಇದೆ. ಕೆಆರ್‌ಡಿ ಎಲ್ ವತಿಯಿಂದ ಆ ರಸ್ತೆಯಲ್ಲಿ ಹೊಸ ಸೇತುವೆ, ರಸ್ತೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇವತ್ತಲ್ಲ ನಾಳೆ ಆ ರಸ್ತೆ ಆಗಿಯೇ ಆಗುತ್ತದೆ. ಇದನ್ನು ಮನಗಂಡ ಕಾಂಗ್ರೆಸ್ಸಿಗರು ರಾಜಕೀಯ ಲಾಭ ಪಡೆಯಲು ಹೀಗೆಲ್ಲ ಭಿಕ್ಷಾಟನೆಯ ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ೭೫ ವರ್ಷ ಆಡಳಿತ ಮಾಡಿತಲ್ಲ. ಅವರಿಗೆ ಯಾಕೆ ಅಭಿವೃದ್ಧಿಯ ಇಚ್ಛಾಸಕ್ತಿ ಇರಲಿಲ್ಲ. ಯಾಕೆ ಕೆಲಸ ಮಾಡಿಸಿಲ್ಲ. ಇಂದು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದೆ. ಇದನ್ನು ಸಹಿಸಲಾಗದೆ ಅವರು ಇದೆಲ್ಲವನ್ನು ಕ್ರಿಯೆಟ್ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.