ನೆಲ್ಲೂರು ಕೆಮ್ರಾಜೆ : ಬಹು ಬೆಳೆ ಕೃಷಿ ಪದ್ಧತಿ ಕುರಿತು ತರಬೇತಿ ಕಾರ್ಯಾಗಾರ

0

ವಿಟ್ಲ ಭಾ.ಕೃ.ಸಂ.ಪ. – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಸಂಘಟನೆಯಲ್ಲಿ, ಕೇರದ ಕಲ್ಲಿಕೋಟೆಯ ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ನೆಲ್ಲೂರುಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಸಹಕಾರದೊಂದಿಗೆ ಅಡಿಕೆ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮಗಳು ಮತ್ತು ಅಡಿಕೆಯೊಂದಿಗೆ ಬಹು ಬೆಳೆ ಕೃಷಿ ಪದ್ಧತಿ ಕುರಿತು ತರಬೇತಿ ಕಾರ್ಯಕ್ರಮ ಮಾ.9 ರಂದು ಸೊಸೈಟಿ ಸಭಾಭವನದಲ್ಲಿ ನಡೆಯಿತು.
ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ವಹಿಸಿದ್ದರು. ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಮತ್ತು ನಿರ್ದೇಶಕ ಉಮೇಶ್ ಪ್ರಭು, ತೋಟಗಾರಿಕಾ ಇಲಾಖೆಯ ವಿಜೇತ್, ಸಿಪಿಸಿಆರ್‌ಐನ ವಿಜ್ಞಾನಿ ಡಾ.ಚೈತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು.ಶೃತಿ ಕೆ. ಪ್ರಾರ್ಥಿಸಿ, ವಿಟ್ಲ ಭಾ.ಕೃ.ಸಂ.ಪ. – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ನಾಗರಾಜ ಎನ್.ಆರ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಟ್ಲ ಭಾ.ಕೃ.ಸಂ.ಪ. – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಜ್‌ಕುಮಾರ್ ವಂದಿಸಿದರು. ಕು.ತನುಜಾ ಕಾರ್ಯಕ್ರಮ ನಿರೂಪಿಸಿದರು.