ಮಾ.22ರ ಮೊದಲು ಅರಂತೋಡು – ಅಡ್ತಲೆ ಕಾಮಗಾರಿ ಆರಂಭಿಸದಿದ್ದರೆ ನೋಟಾ ಅಭಿಯಾನ

0

ಚುನಾವಣೆ ಘೋಷಣೆಯಾಗುವ ಸಂಭವ : ನಿರ್ಧಾರ ಗಟ್ಟಿಗೊಳಿಸಿದ ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ

ಈ ತಿಂಗಳ ಅಂತ್ಯದೊಳಗೆ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಂಭವ ಇರುವುದರಿಂದಾಗಿ, ಮಾ.22ರೊಳಗೆ ಅರಂತೋಡು – ಅಡ್ತಲೆ ರಸ್ತೆಯಲ್ಲಿ 2 ಕೋಟಿ ಅನುದಾನದ ಕಾಮಗಾರಿ ಆರಂಭಿಸದಿದ್ದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ನೋಟ ಮತದಾನದ ಅಭಿಯಾನ ನಡೆಸುವುದಾಗಿ ವೇದಿಕೆಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿ ಪ್ರಸಾದ್ ಅಡ್ತಲೆ ಯವರು ತಿಳಿಸಿದ್ದಾರೆ.

ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಬಗ್ಗೆ ಇದುವರೆಗೂ ನಡೆದಿರುವ ಹೋರಾಟ ಹಾಗೂ ಹೋರಾಟದ ಫಲದ ಪರಿಣಾಮ ರೂ.1 ಕೋಟಿಯ ಕಾಮಗಾರಿ ಆಗಿದೆ.

ಇನ್ನೂ ಕೆಲಸ ಆಗಲಯ ಬಾಕಿ ಇರುವುದರಿಂದ ಅದನ್ನು ಆಡಳಿತ ಮಾಡದೇ ಇರುವುದರಿಂದ ಈ ವಾರದಿಂದ ಮನೆ ಮನೆ ಭೇಟಿ ಮಾಡಿ, ಈ ಬಗ್ಗೆ ಸಮಗ್ರ ಮಾಹಿತಿಗಳನ್ನು ಜನತೆ ಮುಂದಿಟ್ಟು,ನಮ್ಮ ವಾರ್ಡ್ ನ ಹಾಗೂ ರಸ್ತೆ ಫಲಾನುಭವಿಗಳು, ರಸ್ತೆ ಅಭಿವೃದ್ಧಿ ಆಗುವ ತನಕ ಮುಂದಿನ ಎಲ್ಲಾ ಚುನಾವಣೆಗಳಲ್ಲಿ, ನೋಟ ಮತ ಹಾಕಿ, ರಾಜ್ಯ ಮಟ್ಟದಲ್ಲಿ ಸರಕಾರವನ್ನು ಎಚ್ಚರಿಸಿ ನಮ್ಮ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವ ಬಗ್ಗೆ,ನೋಟ ಅಭಿಯಾನ ನಡೆಸುವುದು ಎಂದು ತೀರ್ಮಾನಿಸಿ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಲಾಗಿತ್ತು.
ನಂತರ ಒಂದೆರಡು ದಿನಗಳಲ್ಲಿ, ಆಡಳಿತ ಪಕ್ಷದ ಮಂಡಲ ಅಧ್ಯಕ್ಷರು, ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖರು ವೇದಿಕೆಯೊಂದಿಗೆ ಸಭೆ ನಡೆಸಿ, ಮಾರ್ಚ್ ಒಳಗೆ ಎರಡು ಕೋಟಿಯ ಕಾಮಗಾರಿ ನಡೆಯುತ್ತದೆ, ಉಳಿದ ರಸ್ತೆಯನ್ನು ಸಹ ಬೇರೆ ಅನುದಾನ ದಡಿಯಲ್ಲಿ, ಹಂತ ಹಂತವಾಗಿ ಕಾಮಗಾರಿ ನಡೆಸುತ್ತೇವೆ ಎಂದು ಭರವಸೆ ನೀಡಿರುತ್ತಾರೆ. ಮಾ.31ರ ಒಳಗೆ ಕೆಲಸ ಆರಂಭಿಸುವುದಾಗಿ ಹೇಳಿದ್ದರು.

 ಆದರೆ ವೇದಿಕೆಗೆ  ಬಲ್ಲ ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಇದೆ ತಿಂಗಳ 27 ಕ್ಕೆ  ಚುನಾವಣೆ ನೀತಿ ಸಂಹಿತಿ ಘೋಷಣೆ ಆಗುವ ಸಾಧ್ಯತೆ ಹೆಚ್ಚಿದೆ.

ನೀತಿ ಸಂಹಿತೆ ಘೋಷಣೆ ಆಗುವ ಮೊದಲು ಟೆಂಡರ್ ಆಗಿ ಕಾಮಗಾರಿ ಪ್ರಾರಂಭ ಆಗಿದ್ದಲ್ಲಿ ಮಾತ್ರ ಕೆಲಸ ಮುಂದುವರೆಸಬಹುದು ಎಂಬ ಕಾನೂನು ಇರುತ್ತದೆ.
ಪ್ರಸ್ತುತ ಎರಡು ಕೋಟಿಯ ಅನುದಾನ ಇದುವರೆಗೆ ಟೆಂಡರ್ ಆಗಿರುವುದಿಲ್ಲ. ಹಾಗೂ ಟೆಂಡರ್ ಆಗಲು ಹಾಗೂ ಆದ ನಂತರ ಕೆಲವು ನಿಯಮಾವಳಿಗಳು ಇದ್ದು, ಅದನ್ನೆಲ್ಲ ತಕ್ಷಣಕ್ಕೆ, ಸಂಬಂಧ ಪಟ್ಟವರು ಮುತುವರ್ಜಿ ವಹಿಸದೆ, ಶೀಘ್ರವಾಗಿ ಮಾಡಲು ಪ್ರಯತ್ನ ಮಾಡದೆ ಇದ್ದಲ್ಲಿ ವರ್ಕ್ ಆರ್ಡರ್ ಬರಲು ಸಮಯ ಹಿಡಿಯಬಹುದು ಎಂದು ತಿಳಿದುಬಂದಿರುತ್ತದೆ.(ಎರಡು ಕೋಟಿ ಲ್ಯಾಪ್ಸ್ ಆಗುವ ಸಂಭವ ಇರಬಹುದು )
ಆದುದರಿಂದ, ಜನಪ್ರತಿನಿದಿನಗಳ ಭರವಸೆ ಯ ಮೇಲೆ ನಂಬಿಕೆ ಇಟ್ಟು ಇದೆ ತಿಂಗಳ 22 ರ ತನಕ ಅಭಿವೃದ್ಧಿ ಬಗೆಗಿನ ಆಗು ಹೋಗುಗಳನ್ನು ತಿಳಿದುಕೊಂಡು ಚುನಾವಣೆ ಮೊದಲು ರಸ್ತೆ ಅಭಿವೃದ್ಧಿ ಆಗುವುದಿಲ್ಲ ಎಂದು ಕಂಡು ಬಂದಲ್ಲಿ,ಮಾರ್ಚ್ 23 ರಿಂದ ಈ ಮೊದಲೇ ನಿರ್ಣಯ ಮಾಡಿದಂತೆ ಮನೆ ಮನೆ ಭೇಟಿ ಮಾಡಿ ನೋಟ ಅಭಿಯಾನ ಪ್ರಾರಂಭ ಮಾಡುವುದು ಎಂದು ಅಡ್ತಲೆಯಲ್ಲಿ ಮಾ.13 ರಂದು ನಡೆದ ನಾಗರಿಕ ಹಿತರಕ್ಷಣ ವೇದಿಕೆಯ ಗೌರವ ಸಲಹೆಗಾರರ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.