ಬಾಳುಗೋಡು: ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ

0

ಬಾಳುಗೋಡು ಗ್ರಾಮದ ಎರಡು ಕಡೆ ಇಂದು ಮತದಾನ ಬಹಿಷ್ಕಾರದ ಬ್ಯಾನರ್ ಕಂಡು ಬಂದಿದೆ. ಅದರಲ್ಲಿ ಹರಿಹರ ಬಾಳುಗೋಡು ರಸ್ತೆ ಅಭಿವೃದ್ಧಿ ಆಗದ ಬಗ್ಗೆ ಉಲ್ಲೇಖಿಸಿ ಮತದಾನ ಬಹಿಷ್ಕಾರವನ್ನು ಮಾಡುವುದಾಗಿ ಬರೆಯಲಾಗಿದೆ. ಕಾಂತುಕುಮೇರಿ ಬಳಿ ಹಾಗೂ ಬೆಂಡೋಡಿ ಕ್ರಾಸ್ ಬಳಿ ಒಂದೊಂದು ಬ್ಯಾನರ್ ಕಂಡು ಬಂದಿದೆ. ಬ್ಯಾನರ್ ಯಾರಾದರೂ ಹರಿದರೆ ದೈವಕ್ಕೆ ಹರಕೆಯನ್ನು ಹೇಳಲಾಗುವುದು ಎಂದು ಅದರಲ್ಲಿ ಬರೆಯಲಾಗಿದೆ.