ಕುಂಡಡ್ಕ : ಪ್ರಥಮ ವರ್ಷದ ಕೆ.ಪಿ.ಎಲ್ ಸ್ನೇಹ ಸೌಹಾರ್ದ ಟ್ರೋಫಿ

0

ಚೆನ್ನಾವರ ಎನ್.ಎಸ್. ವಾರಿಯರ್ಸ್‌ ಗೆ ಚಾಂಪಿಯನ್ ಪಟ್ಟ

ಶೈನ್ ಈಗಲ್ಸ್ ಕುಂಡಡ್ಕ ರನ್ನರ್ಸ್

ಮುಕ್ಕೂರು ಶ್ರೀ ಗೌರಿ ಗೆಳೆಯರ ಬಳಗದ ಆಶ್ರಯದಲ್ಲಿ ಮಾ.19 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿರುವ ಪ್ರಥಮ ವರ್ಷದ ಕುಂಡಡ್ಕ ಪ್ರೀಮಿಯರ್ ಲೀಗ್ ಸೀಸನ್-1( ಕೆ.ಪಿ.ಎಲ್ ) ಸ್ನೇಹ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಪೈನಲ್ ಹಣಾಹಣಿಯಲ್ಲಿ ಅಂತಿಮವಾಗಿ ಎನ್.ಎಸ್. ವಾರಿಯರ್ಸ್‌ ಚೆನ್ನಾವರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಅಂತಿಮ ಹಣಾಹಣಿಯಲ್ಲಿ ಶೈನ್ ಈಗಲ್ಸ್ ಕುಂಡಡ್ಕ ಹಾಗೂ ಎನ್.ಎಸ್. ವಾರಿಯರ್ಸ್‌ ಚೆನ್ನಾವರ ತಂಡದ ನಡುವೆ ಪಂದ್ಯಾಟ ನಡೆಯಿತು. ಸಂಜೆಯ ಮಂದ ಬೆಳಕಿನ ಸಂಪೂರ್ಣ ಲಾಭ ಪಡೆದ ಎನ್.ಎಸ್.ಚೆನ್ನಾವರ ತಂಡವು ಕುಂಡಡ್ಕ ತಂಡವನ್ನು ಸೋಲಿಸಿ ವಿಜಯದ ನಗೆ ಬೀರಿತು. ಲೀಗ್ ಹಂತದಲ್ಲಿ ಗರಿಷ್ಠ ಪಂದ್ಯ ಗೆಲುವು ದಾಖಲಿಸಿ ಪೈನಲ್ ಪ್ರವೇಶಿಸಿದ್ದ ಶೈನ್ ಈಗಲ್ಸ್ ಕುಂಡಡ್ಕ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಆರು ತಂಡಗಳ
ನಡುವೆ ಲೀಗ್ ಸ್ಪರ್ದೆ
ಒಟ್ಟು ಆರು ತಂಡಗಳ ಮಧ್ಯೆ ಲೀಗ್ ಮಾದರಿಯಲ್ಲಿ ಸ್ಪರ್ಧೆ ನಡೆಯಿತು. ಕ್ರೀಡಾಸ್ತಕರು ಒಂದುಗೂಡಿ ನಡೆಸುವ ಸ್ನೇಹ ಬೆಸುಗೆಯ ಕ್ರೀಡಾಕೂಟ ಇದಾಗಿದೆ. ದಿನೇಶ್ ಕಂರ್ಬುತ್ತೋಡಿ ಮಾಲಕತ್ವದ ಕಾನಾವು ಶ್ರೀ ವಾರಿಯರ್ಸ್ ತಂಡ, ಕಾರ್ತಿಕ್ ರೈ ಕನ್ನೆಜಾಲು ಮಾಲಕತ್ವದ ಕನ್ನೆಜಾಲು ರೈ ರೈಡರ್ಸ್ ತಂಡ, ಸತೀಶ್ ಮತ್ತು ಪ್ರವೀಣ್ ಕುಂಡಡ್ಕ ಮಾಲಕತ್ವದ ಶೈನ್ ಈಗಲ್ಸ್ ಕುಂಡಡ್ಕ, ಕೃಷ್ಣಪ್ಪ ಬಂಬಿಲ ಮತ್ತು ಕುಸುಮಾಧರ ಮುಕ್ಕೂರು ಮಾಲಕತ್ವದ ಕೆಕೆ ಟ್ರೆಂಡ್ಸ್ ಬಂಬಿಲ, ಅಹ್ಮದ್‌ ಕುಂಡಡ್ಕ ಮತ್ತು ಸದ್ಧಾದ್ ಮಾಲಕತ್ವದ Torpedo’s ಮುಕ್ಕೂರು , ನೌಶಾದ್ ಚೆನ್ನಾವರ ಮತ್ತು ಸಿದ್ಧೀಕ್ ಎಫ್ ಸಿ ಚೆನ್ನಾವರ ಮಾಲಕತ್ವದ ಎನ್.ಎಸ್.ವಾರಿಯರ್ಸ್ ಚೆನ್ನಾವರ ತಂಡಗಳ ನಡುವೆ ಪಂದ್ಯಾಟ ನಡೆಯಿತು. ಅತ್ಯುತ್ತಮ ಪ್ರದರ್ಶನ ನ಼ೀಡಿದ ಆಟಗಾರರಿಗೆ ವೈಯಕ್ತಿಕ ಬಹುಮಾನ ವಿತರಿಸಲಾಯಿತು.