ನ್ಯೂ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅಯ್ಯನಕಟ್ಟೆ

0

ಅಧ್ಯಕ್ಷರಾಗಿ ಖಲೀಲ್ ಅಯ್ಯನಕಟ್ಟೆ, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಅಜೀಜ್ ಗುರಿಕ್ಕಾನ

ಅಯ್ಯನಕಟ್ಟೆ ನ್ಯೂ ಸ್ಟಾರ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ನ 2023/24 ನೇ ಸಾಲಿನ ಮಹಾಸಭೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಖಲೀಲ್ ಆಯ್ಯನಕಟ್ಟೆ, ಉಪಾಧ್ಯಕ್ಷರಾಗಿ ಖಾಲಿದ್ ಕಳಂಜ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಗುರಿಕ್ಕಾನ, ಜೊತೆ ಕಾರ್ಯದರ್ಶಿ ಮನೋಹರ್
,ಕೋಶಾಧಿಕಾರಿಯಾಗಿ ಜಯಂತ ಎ ಆಯ್ಕೆ ಆಗಿರುತ್ತಾರೆ.

ಸದ್ಯಸ್ಯರಾಗಿ ನಾಸಿರ್ ಆಯ್ಯನಕಟ್ಟೆ, ಆನಂದ ಪಂಜಿಗಾರ್, ಯೂಸುಫ್ ಸಿ ಎಂ, ಕರೀಮ್ ಪಲ್ಲತಡ್ಕ, ಅಶ್ರಫ್ ಗೊಳ್ತಡ್ಕ, ಮೋಹನ್ ಆಯ್ಯನಕಟ್ಟೆ,
ಶಂಶುದ್ದೀನ್ ಪಲ್ಲತಡ್ಕ ಆಯ್ಕೆ ಆಗಿರುತ್ತಾರೆ. 1999-2000 ರಲ್ಲಿ ಆರಂಭಗೊಂಡ ನ್ಯೂ ಸ್ಟಾರ್ ಅರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕೇವಲ ಕ್ರೀಡೆಗೆ ಸೀಮಿತವಲ್ಲದೆ ತನ್ನ ಎಲ್ಲಾ ಸದಸ್ಯರ ಸಹಕಾರದಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡು ಸಾರ್ವಜನಿಕ ವಲಯದಲ್ಲಿ ಹೆಸರುವಾಸಿಯಾಗಿದೆ.
ವರ್ಷದ ಹಿಂದೆ ಅಯ್ಯನಕಟ್ಟೆ ಕಾಲೋನಿಯಲ್ಲಿ ಮನೆಯೊಂದರ ರಿಪೇರಿ ಸಂಪೂರ್ಣ ಖರ್ಚು (ಅಂದಾಜು2.5 ಲಕ್ಷ)ಮಾಡಿ ರುತ್ತಾರೆ.
ಕೊರೋನ ಲಕ್ಡೌನ್ ಸಮಯದಲ್ಲಿ ಹಲವಾರು ಬಡಜನರಿಗೆ ಕಿಟ್ ವಿತರಣೆ ಮಾಡಲಾಗಿದೆ.
ಬಡಜನರ ಶವಸಂಸ್ಕಾರ ಕಾರ್ಯಕ್ರಮಕ್ಕೆ ಬೇಕಾದ ವ್ಯವಸ್ಥೆ ಮಾಡುವಲ್ಲಿ ಸಹಕಾರಿಯಾಗಿದೆ. ರಂಜಾನ್ ನಲ್ಲಿ ಕಿಟ್, ಇಫ್ತಾರ್ ಸಂಗಮ ಮಾಡಿ ಜನರ ಮನಗೆದ್ದಿದೆ.
ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮಕ್ಕೆ ತಲಾ 2,5000 ರೂ ನಂತೆ 15 ಕ್ಕೂ ಹೆಚ್ಚು ಮನೆಗಳಲ್ಲಿ ಸಹಕರಿಸುತ್ತಾರೆ.
ಜಾತಿ ಮತ ಧರ್ಮ ಎಂಬ ಬೇಧಭಾವ ಇಲ್ಲದೆ ಕಾರ್ಯಾಚರಿಸುತ್ತಿರುವ ಈ ಯುವಕರು ಆಪತ್ಭಾಂವನಂತೆ ಕಾರ್ಯಾಚರಿಸುತ್ತಿದ್ದಾರೆ.