ಸಂಪಾಜೆ : ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಪ್ರಥಮ ಸಭೆ, ಸಮಿತಿ ರಚನೆ

0

ದ.ಕ.ಸಂಪಾಜೆ ಗ್ರಾಮದ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಪ್ರಥಮ ಸಭೆಯು ಕಲ್ಲುಗುಂಡಿಯ ಸಮನ್ವಯ ಸಭಾಂಗಣದಲ್ಲಿ ಜರುಗಿತು. ವೇದಿಕೆಯ ಗೌರವ ಸಂಚಾಲಕರಾಗಿರುವ ಸೋಮಶೇಖರ್ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಗ್ರಾಮದ ಪ್ರಮುಖ ಮುಖಂಡರುಗಳು ಸಾರ್ವಜನಿಕ ಸ್ಮಶಾನ ಭೂಮಿಯ ಕೊರತೆ, ಪ್ಲಾಟಿಂಗ್ ಸಮಸ್ಯೆ, ಅರಣ್ಯ ಇಲಾಖೆಯವರು ಜಂಟಿ ಸರ್ವೇ ಮಾಡದೆ ತಮಗಿಷ್ಟ ಬಂದಂತೆ ಗಡಿ ಗುರುತು ಮಾಡುತ್ತಿರುವುದು, ಗ್ರಾಮದ ಹೊಳೆಗಳಲ್ಲಿ ಹೂಳೆತ್ತದೆ ಇರುವುದು, ವಿದ್ಯುತ್ ಸಮಸ್ಯೆ, ಅಡಕೆ ಹಳದಿ ರೋಗದ ಸಮಸ್ಯೆ ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಬೇಕಾದ ಹೋರಾಟಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿ ಸಂಪಾಜೆ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಸಮಿತಿಯನ್ನು ರಚಿಸಲಾಯಿತು.


ಗೌರವಾಧ್ಯಕ್ಷರಾಗಿ ಯು.ಬಿ.ಚಕ್ರಪಾಣಿ, ಗೌರವ ಸಂಚಾಲಕರಾಗಿ ಸೋಮಶೇಖರ್ ಕೊಯಿಂಗಾಜೆ, ಅಧ್ಯಕ್ಷರಾಗಿ ಕೆ.ಪಿ.ಜಾನಿ, ಉಪಾಧ್ಯಕ್ಷರುಗಳಾಗಿ ಸುಬ್ರಹ್ಮಣ್ಯ ಕದಿಕಡ್ಕ, ಸಿರಿಲ್ ಕ್ರಾಸ್ತ , ಸವಿತಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಜೆ.ವಸಂತ ಗೌಡ ಪೆಲ್ತಡ್ಕ, ಕಾರ್ಯದರ್ಶಿಗಳಾಗಿ ಎಂ.ಸಿ.ಅಬೂಬಕ್ಕರ್, ಜ್ಞಾನಶೀಲನ್ ನೆಲ್ಲಿಕುಮೇರಿ, ಸಿದ್ದೀಕ್ ದೊಡ್ಡಡ್ಕ, ಕೋಶಾಧಿಕಾರಿಯಾಗಿ ಪಿ.ಕೆ.ಯೋಗೇಶ್, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಹಲವು ಮುಖಂಡರುಗಳನ್ನು ಆಯ್ಕೆಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಗ್ರಾಮದ ಪ್ರತೀ ವಾರ್ಡ್ ನಿಂದ ಪ್ರಮುಖರನ್ನು ಮತ್ತು ಪ್ರಮುಖ ಸಂಘ ಸಂಸ್ಥೆಗಳ ಅಧ್ಯಕ್ಷರನ್ನು ಕಾರ್ಯಕಾರಿಣಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಯಿತು.