ಗಡಿಕಲ್ಲು ಅಂಗನವಾಡಿ 7 ಲಕ್ಷ ರೂ.ಗಳಲ್ಲಿ ನಿರ್ಮಿಸಬಹುದಿತ್ತು ಎಂದು ಹೇಳಿದ್ದೇನೆ ಹೊರತು ನಾನು ನಿರ್ಮಿಸುತ್ತಿದ್ದೆ ಎಂದಿಲ್ಲ : ಕೆ.ಪಿ.ಜಾನಿ

0


ಸಂಪಾಜೆಯ ಗ್ರಾಮಸಭೆಯಲ್ಲಿ ಅಂಗನವಾಡಿ ಕಟ್ಟಡದ ಯೋಜನಾ ವೆಚ್ಚದ ಬಗ್ಗೆ ನಾನು ಪ್ರಶ್ನಿಸಿದ್ದೆ. ಆದರೆ ನಾನು 7 ಲಕ್ಷ ರೂ.ಗಳಲ್ಲಿ ಅದನ್ನು ಮಾಡಿಕೊಡುತ್ತಿದ್ದೆ ಎಂದಿಲ್ಲ ಎಂದು ಗ್ರಾಮಸ್ಥರಾದ ಕೆ.ಪಿ.ಜಾನಿ ತಿಳಿಸಿದ್ದಾರೆ.
“ಗಡಿಕಲ್ಲು ಅಂಗನವಾಡಿ ಕಟ್ಟಡಕ್ಕೆ ಹದಿನೈದೂವರೆ ಲಕ್ಷ ರೂ. ವೆಚ್ಚವಾಗಿದೆ ಎಂದು ನಮೂದಾಗಿದೆ. ನಾನು ನಿರ್ಮಿಸುವ ರೀತಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ಅದನ್ನು ನಿರ್ಮಸುವುದಿದ್ದರೆ 7 ಲಕ್ಷ ರೂ.ಗಳಲ್ಲಿ ಆಗುತ್ತಿತ್ತು ಎಂದು ಹೇಳಿದ್ದೇನೆ. ಹದಿನೈದೂವರೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದರೆ ಅರಮನೆಯಂತೆ ನಿರ್ಮಿಸಬಹುದಿತ್ತು. ಉತ್ತಮ ಗುಣಮಟ್ಟದಲ್ಲಿ ಎಲ್ಲಾ ಸೌಲಭ್ಯಗಳನ್ನೊಳಗೊಂಡು ಕಟ್ಟಡ ನಿರ್ಮಿಸುವುದಿದ್ದರೆ ನಾವು ಚದರಡಿಗೆ 1800 ರೂ. ವಿಧಿಸುತ್ತೇವೆ. ಈ ಅಂಗನವಾಡಿ ಕಟ್ಟಡದ ಲೆಕ್ಕ ನೋಡುವಾಗ 2280 ರೂ.ಗಳಿಗಿಂತ ಹೆಚ್ಚು ಚದರಡಿ ದರ ಬರುತ್ತದೆ. ಇದಕ್ಕೆ ಉತ್ತರಿಸಿದ ಇಂಜಿನಿಯರ್ ಎಸ್‌ಆರ್ ರೇಟ್ ಪ್ರಕಾರ ಮಾಡಲಾಗಿದೆ ಎಂದು ಹೇಳಿದರು. ಆ ವಿವರಣೆಯನ್ನು ನಾವು ಒಪ್ಪಿಲ್ಲ” ಎಂದು ಅವರು ತಿಳಿಸಿದ್ದಾರೆ.