ಆಲೆಟ್ಟಿ ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಆಲೆಟ್ಟಿ ಗ್ರಾಮ ಪಂಚಾಯತ್ ನ 2022-23 ನೇ ಸಾಲಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಮಾ.20 ರಂದು ನಡೆಯಿತು. ನೊಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಅರಬಣ್ಣ ಪೂಜೇರ ಸಭೆ ನಡೆಸಿದರು.
ಸಭೆಯು ಆರಂಭವಾಗುವ ಮೊದಲೇ ಅಧಿಕಾರಿಗಳು ಗೈರಾಗಿರುವುದನ್ನು ಸದಸ್ಯರು ಆಕ್ಷೇಪಿಸಿದರು.
ವರದಿ ವಾಚಿಸುವ ಮೊದಲು ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.


ವಾರ್ಡು ಸಭೆಯ ನಿರ್ಣಯದ ಬಗ್ಗೆ ವಿವರ ನೀಡುವಂತೆ ಒತ್ತಾಯಿಸಿದರು. ರುದ್ರ ಭೂಮಿ ಮತ್ತು ಘನತ್ಯಾಜ್ಯ ನಿರ್ವಹಣೆಯ ವಿವರ ಕೇಳಲಾಯಿತು. ಹೆದ್ದಾರಿ ಬದಿಯಲ್ಲಿ ಇರುವ ಅನಧಿಕೃತ ಅಂಗಡಿ ಮುಂಗಟ್ಟು ತೆರವುಗೊಳಿಸುವಂತೆ ಒತ್ತಾಯಿಸಲಾಯಿತು. ರಸ್ತೆ ಸಂಪರ್ಕದ ವೈಯುಕ್ತಿಕ ವ್ಯಾಜ್ಯ ಪರಿಶೀಲಿಸಿ ಸಂಪರ್ಕ ಕಲ್ಪಿಸುವಂತೆ ಆಗ್ರಹ ವ್ಯಕ್ತವಾಯಿತು. ಕೇಂದ್ರ ಸರಕಾರದ ಜಲ ಜೀವನ ಯೋಜನೆಯ ಕೆಲಸ ಕಾರ್ಯದ ಸಂಪೂರ್ಣ ಮಾಹಿತಿ ವಿವರ ನೀಡುವಂತೆ ಗ್ರಾಮಸ್ಥರು ಒತ್ತಡ ಹಾಕಿದರು. ಭೂತಕಲ್ಲು
ಸರಕಾರಿ ಶಾಲೆಯ ಜಾಗದ ಗಡಿ ಗುರುತು ಪ್ರಕ್ರಿಯೆ ಮಾಡಬೇಕು. ಜಾಗವನ್ನು ಉಳಿಸಿಕೊಳ್ಳುವಂತೆ ಅಭಿಪ್ರಾಯ ವ್ಯಕ್ತವಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಪಿ.ಡಿ.ಒ ಕೀರ್ತಿಪ್ರಸಾದ್, ಸದಸ್ಯರಾದ
ಸತ್ಯಕುಮಾರ್ ಆಡಿಂಜ, ಚಂದ್ರಕಾಂತ ನಾರ್ಕೋಡು, ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸುದೇಶ್ ಅರಂಬೂರು, ರತೀಶನ್ ಅರಂಬೂರು, ಧರ್ಮಪಾಲ ಕೊಯಿಂಗಾಜೆ, ಶಿವಾನಂದ ರಂಗತ್ತಮಲೆ, ಸತ್ಯಪ್ರಸಾದ್ ಗಬ್ಬಲ್ಕಜೆ, ಗೀತಾ ಕೋಲ್ಚಾರು,
ಕೆ. ಕಮಲ ನಾಗಪಟ್ಟಣ, ಶಶಿಕಲಾ ದೋಣಿಮೂಲೆ, ವೀಣಾಕುಮಾರಿ ಆಲೆಟ್ಟಿ, ಶಂಕರಿ ಕೊಲ್ಲರಮೂಲೆ, ವೇದಾವತಿ ಎನ್.ಪಿ, ಎಂ.ಜಿ.ಭಾಗೀರಥಿ,
ಮೀನಾಕ್ಷಿ ಕೆ, ಕುಸುಮ ಬಿಲ್ಲರಮಜಲು ಉಪಸ್ಥಿತರಿದ್ದರು. ತಾಲೂಕು
ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.