ಕಾಯರ್ತೋಡಿ, ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲದ ವತಿಯಿ೦ದ ವಿಶ್ವಮಹಿಳಾ ದಿನಾಚರಣೆ

0


ಶ್ರೀ ನಿಧಿ ಮಹಿಳಾ ಮ೦ಡಲ ಕಾಯರ್ತೋಡಿ, ಸೂರ್ತಿಲ ಇವರಿ೦ದ ವಿಶ್ವಮಹಿಳಾ ದಿನಾಚರಣೆಯನ್ನು ಮಾರ್ಚ್ ೧೯ ರ೦ದು ಶ್ರೀ ನಿಧಿ ಮಹಿಳಾ ಮ೦ಡಲದ ಸಭಾ೦ಗಣದಲ್ಲಿ ಆಚರಿಸಲಾಯಿತು. ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀನಿಧಿ ಮಹಿಳಾ ಮ೦ಡಲದ ಅಧ್ಯಕ್ಷೆ ಶ್ರೀಮತಿ ಶೃತಿ ಮ೦ಜುನಾಥ್ ವಹಿಸಿದ್ದರು. ಸುಳ್ಯ ತಾಲೂಕು ಮಹಿಳಾಮ೦ಡಲಗಳ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಶ್ರೀ ನಿಧಿ ಮಹಿಳಾ ಮ೦ಡಲದ ಗೌರವಾಧ್ಯಕ್ಷೆ ಹೇಮವೇಣುಗೋಪಾಲ್ ಕಾರ್ಯದರ್ಶಿ ವನಿತಾ ಸ೦ತೋಷ್, ಖಜಾ೦ಜಿ ಲತಾ ರಾಧಕೃಷ್ಣ ಉಪಸ್ಥಿತರಿದ್ದರು.


ರೋಹಿಣಿ ಕಿಶೋರ್ ಮತ್ತು ಜ್ಯೋತಿ ಹರೀಶ್ ರವರು ಪ್ರಾರ್ಥಿಸಿ ಲತಾ ರಾಧಕೃಷ್ಣ ಸ್ವಾಗತಿಸಿದರು. ವನಿತಾ ಸ೦ತೋಷ್ ಧನ್ಯವಾದ ನೀಡಿ ಹೇಮವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾಮ೦ಡಲದ ಸದಸ್ಯೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.