ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ತನುಷಾ ಕೆ. ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಇತ್ತೀಚಿಗೆ ನಡೆದ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ತನುಷಾ ಕೆ. ಕುಂದ್ರುಕೋಡಿ ಯವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ವಾಗ್ದೇವಿ ಸಂಗೀತ ಶಾಲೆ ಜಾಲ್ಸುರ್ ಶಾಖೆಯ ವಿದ್ಯಾರ್ಥಿನಿಯಾಗಿರುವ ಇವರು ಶ್ರೀಮತಿ ಸವಿತಾ ಗೋಪಾಲಕೃಷ್ಣ ಅಡ್ಯನಡ್ಕ ಇವರ ಶಿಷ್ಯೆ.

ಕುಂದ್ರುಕೋಡಿ ಕೃಷ್ಣಪ್ಪ ಮೇಸ್ತ್ರಿ ಹಾಗೂ ಜಾಲ್ಸುರ್ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜರವರ ಪುತ್ರಿಯಾಗಿರುವ ಈಕೆ ಪಯಸ್ವಿನಿ ಪ್ರೌಢಶಾಲೆ ಜಾಲ್ಸುರು ಇಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.